Uttara Kannada

ಉ.ಕ|ಯುವತಿ ನಾಪತ್ತೆ

ಕಾರವಾರ : ಸೀಬರ್ಡ್ ಕಾಲೋನಿ, ಚಿತ್ತಾಕುಲ ನಿವಾಸಿ ಸುನೀತಾ ಕಿರಣ ಲಮಾಣಿ ಎಂಬ 20 ವರ್ಷದ ಯುವತಿ ಕಾಣೆಯಾಗಿದ್ದಾಳೆಂದು ಕುಟುಂಬದವರು ಚಿತ್ತಾಕುಲಾ ಠಾಣೆಗೆ ದೂರು ನೀಡಿದ್ದಾರೆ. 10 ಎಪ್ರಿಲ್ 2024 ರಂದು ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೋದವಳು, ಮನೆಗೂ ಬಾರದೇ ,ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ. ಮೂಲತಃ ಈಕೆ ಲಕ್ಷಮೇಶ್ವರ, ಅಕ್ಕಿಗುಂದಿ, ಗದಗ ಜಿಲ್ಲೆಯವರು. ಈಕೆಯ ಕುಟುಂಬ ಕಳೆದ ಕೆಲ ವರ್ಷಗಳಿಂದ ಸದಾಶಿವಗಡ ಚಿತ್ತಾಕುಲದಲ್ಲಿ ವಾಸವಿದ್ದಾರೆ.

ಕಾಣೆಯಾದ ಯುವತಿ ಸುನೀತಾ ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, 5.5 ಅಡಿ ಎತ್ತರ, ಕನ್ನಡ, ಕೊಂಕಣಿ, ಲಮಾಣಿ ಭಾಷೆ ಮಾತನಾಡುತ್ತಾಳೆ. ಕಪ್ಪು ಬಣ್ಣದ ಪ್ಯಾಂಟ, ಬಿಳಿ ಬಣ್ಣದ ಟಾಪ, ಕಪ್ಪು ಬಣ್ಣದ ರವಿಕೆ (ಚೂಡಿದಾರ) ಧರಿಸಿದ್ದಾಳೆ. ಈಕೆ ಸಾರ್ವಜನಿಕರಿಗೆ ಕಂಡು ಬಂದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆ ಪೋನ ಸಂಖ್ಯೆ: 08382-265733, ಮೊಬೈಲ್ ಸಂ: 9480805248 ಪೊಲೀಸ ವೃತ್ತ ನಿರೀಕ್ಷಕರು ಕದ್ರಾ ವೃತ್ತ ಪೋನ ಸಂಖ್ಯೆ: 08382- 265200. ಮೊಬೈಲ್ ಸಂ: 9480805231 ಉತ್ತರ ಕನ್ನಡ ಪೊಲೀಸ್ ಕಂಟ್ರೋಲ್ ರೂಂ ಸಂ:08382-226550 ನ್ನು ಸಂಪರ್ಕಿಸುವಂತೆ ಚಿತ್ತಾಕುಲ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button