ಯತ್ನಾಳ್​ರಲ್ಲಿ ಯಾವ ಸಾಮರ್ಥ್ಯ ಇದೆಯಂತ ರಾಜ್ಯಾಧ್ಯಕ್ಷ ಮಾಡುತ್ತಾರೆ – ಮಾಜಿ ಸಚಿವ ಮುರುಗೇಶ್‌ ನಿರಾಣಿ

ದೆಹಲಿ: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್‌ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಪುತ್ರ ಬ ವೈ ವಿಜಯೇಂದ್ರ ಅವರನ್ನ ನೇಮಕ ಮಾಡಿದ ಬಳಿಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತೀವ್ರ ವಾಗ್ದಾಳಿಯನ್ನ ಮುಂದುರೆಸಿದ್ದು, ಇದೀಗ ಯತ್ನಾಳ್‌ ವಿರುದ್ಧ ಮಾಜಿ ಸಚಿವ ಮುರುಗೇಶ್‌ ನಿರಾಣಿ ಕುಟುಕಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯತ್ನಾಳ್ ಮಾಡಿರುವ ಸಾಧನೆಯಾದರೂ ಏನು ಅಂತ ಅವರನ್ನು ರಾಜ್ಯಾಧ್ಯಕ್ಷ ಮಾಡುತ್ತಾರೆ? ಬಿವೈ ವಿಜಯೇಂದ್ರ ತಮ್ಮ ಸಾಮರ್ಥ್ಯವನ್ನು ಬೇರೆ ಬೇರೆ ಹಂತಗಳಲ್ಲಿ ಸಾಬೀತು ಮಾಡಿದ್ದಾರೆ. ಅವರ ಕೆಲಸ, ಸಂಘಟನಾ ಚಾತುರ್ಯ ಮತ್ತು ಸಮೀಕ್ಷೆಗಳನ್ನು ಆಧರಿಸಿ ಅವರನ್ನು ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದು ಮುರುಗೇಶ್‌ ನಿರಾಣಿ ಹೇಳಿದ್ದಾರೆ.

ಒಂದು ಸ್ಥಾನದಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಲಿಲ್ಲ ಎಂದು ಬಸವನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಎಲ್ಲೆಲ್ಲಿ ಭಾಷಣ ಮಾಡಿದ್ದಾರೆ ಅಲ್ಲಿ ಯಾರು ಗೆದ್ದಿಲ್ಲ.ಇನ್ನೂ ಬಿಜಾಪುರದಲ್ಲಿ ಎಷ್ಟು ಜನರನ್ನು ಯತ್ನಾಳ್‌ ಗೆಲ್ಲಿಸಿದ್ದಾರೆ? ಶಕ್ತಿ ಇದ್ದರೇ ಬಿಜಾಪುರದಲ್ಲಿ 2-3 ಸ್ಥಾನ ಗೆಲ್ಲಿಸಬೇಕಿತ್ತು. ಇವರ ನಾಯಕತ್ವ ಎಂತದ್ದು ಎನ್ನುವುದು ಗೊತ್ತಿದೆ. ಪಾಪದ ಕೊಡ ತುಂಬಿದ ಮೇಲೆ ಎಲ್ಲವೂ ಮುಗಿಯಿತು. ಇವರದ್ದು ಪಾಪದ ಕೊಡ ತುಂಬಲು ಬಂದಿದೆ.

ನಾಲ್ಕು ಜನರು ಚಪ್ಪಾಳೆ ಹೊಡೆದರೆ ನಾಯಕ ಅಲ್ಲ. ಲಕ್ಷಾಂತರ ಜನರನ್ನು ಸೇರಿಸಿ ಎಂದಾದರೂ ಕಾರ್ಯಕ್ರಮ ಮಾಡಿದ್ದಾರಾ?. ಸಮಾಜಕ್ಕೆ ಅವರ ಕೊಡುಗೆ ಏನು? ಖರ್ಚು ಮಾಡದೇ ಬೇರೆಯವರು ಆಯೋಜನೆ ಮಾಡಿದ ಕಾರ್ಯಕ್ರದಲ್ಲಿ ಬಂದು ಮಾತನಾಡುತ್ತಾರೆ . ಇನ್ನೂ ಆರ್‌ ಅಶೋಕ್ ಎಂಟು ಬಾರಿ ಶಾಸಕರು, ಸಚಿವರು ಡಿಸಿಎಂ ಆಗಿದ್ದರು.ಸಂಘಟನೆ ಎಲ್ಲವೂ ನೋಡಿ ಹುದ್ದೆ ನೀಡಿದ್ದಾರೆ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹಾಗೂ ಅಶೋಕ್‌ ಅವರಿಗೆ ವಿಪಕ್ಷ ಸ್ಥಾನವನ್ನ ನೀಡಿರುವುದಕ್ಕೆ ಯತ್ನಾಳ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ನಿರಾಣಿ ಕಿಡಿಕಾರಿದರು.

Latest Indian news

Popular Stories