ಉತ್ತರ ಭಾರತದಲ್ಲಿ ಆವರಿಸಿದ ದಟ್ಟ ಮಂಜು: 11 ರೈಲುಗಳು ವಿಳಂಬ

ದೆಹಲಿ: ಉತ್ತರ ಭಾರತದ ರಾಜ್ಯಗಳಾದ್ಯಂತ ದಟ್ಟವಾದ ಮಂಜು ಆವರಿಸಿದ್ದು ಗೋಚರಣೆ ತೀರ ಕಡಿಮೆಯಾಗಿದೆ. ಹೀಗಾಗಿ ರೈಲು ಮಾರ್ಗಗಳು ಕಾಣದಂತಾಗಿದ್ದು 11 ರೈಲುಗಳು ವಿಳಂಬಗೊಂಡಿವೆ. ಭಾರತೀಯ ಹವಾಮಾನ ಇಲಾಖೆ (IMD) ಡಿಸೆಂಬರ್ 30 ರವರೆಗೆ ದಟ್ಟವಾದ ಮಂಜು ಇರಲಿದೆ ಎಂದು ಮುನ್ಸೂಚನೆ ನೀಡಿದೆ.

ದೆಹಲಿ ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಕೆಲವು ಭಾಗಗಳಲ್ಲಿ ಶೀತ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಜೊತೆಗೆ ಡಿಸೆಂಬರ್ 31ರ ಬೆಳಗ್ಗೆಯಿಂದ ಮಂಜು ವಾತಾವರಣ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ದಟ್ಟವಾದ ಮಂಜಿನ ಪರಿಸ್ಥಿತಿಗಳು ಸಾರಿಗೆ ಸೇವೆಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ. ಇದರಿಂದಾಗಿ ದೇಶದ ಹಲವೆಡೆ ವಿಮಾನಗಳು ಮತ್ತು ರೈಲು ಸಂಚಾರಗಳು ವಿಳಂಬವಾಗಿವೆ. ಉತ್ತರ ರೈಲ್ವೆಯ ಇತ್ತೀಚಿನ ನವೀಕರಣಗಳ ಪ್ರಕಾರ, ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟವಾದ ಮಂಜಿನಿಂದಾಗಿ 11 ರೈಲುಗಳು ವಿಳಂಬವಾಗಿವೆ.

ಇನ್ನೂ ದಟ್ಟವಾದ ಮಂಜಿನಿಂದಾಗಿ ಗ್ರೇಟರ್ ನೋಯ್ಡಾವನ್ನು ಒಳಗೊಂಡಿರುವ ಗೌತಮ್ ಬುದ್ಧ ನಗರದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಜಿಲ್ಲಾಡಳಿತವು ಡಿಸೆಂಬರ್ 29 ಮತ್ತು 30 ರಂದು ಶಾಲೆಗಳನ್ನು ಮುಚ್ಚಲು ಆದೇಶಿಸಿದೆ.

Latest Indian news

Popular Stories