
Uttara Kannada
‘ರಾಷ್ಟ್ರೀಯ ಪ್ರಶಸ್ತಿ’ ಹಿಂದಿರುಗಿಸುವುದಾಗಿ ‘ಪ್ರಧಾನಿ ಮೋದಿ’ಗೆ ಕುಸ್ತಿಪಟು ‘ವಿನೇಶ್ ಫೋಗಟ್’ ಪತ್ರ
ನವದೆಹಲಿ : ಅಗ್ರ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನ ಹಿಂದಿರುಗಿಸುವುದಾಗಿ ಘೋಷಿಸಿದ್ದು, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಕುಸ್ತಿಯಿಂದ ಸಾಕ್ಷೀ ಮಲಿಕ್ ನಿವೃತ್ತಿ ಘೋಷಿಸಿದ್ದು, ಬಜರಂಗ್ ಪೂನಿಯಾ ತಮ್ಮ ಪದ್ಮಶ್ರೀಯನ್ನ ಹಿಂದಿರುಗಿಸಿದ ಒಂದು ವಾರದೊಳಗೆ, ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಭಾಗವಾಗಿದ್ದ ಮೂರನೇ ಅಗ್ರ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನ ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ




