ಉ.ಕ | ನಿಯಮ ಮೀರಿ ಪದೋನ್ನತಿ ಹಾಗೂ ವರ್ಗಾವಣೆ : ಆರೋಪ

ಕಾರವಾರ: ಸರ್ಕಾರದ ನಿಯಮ ಮೀರಿ ಅಂಗನವಾಡಿ ಕಾರ್ಯಕರ್ತೆಯರ ಪದೋನ್ನತಿ ಹಾಗೂ ವರ್ಗಾವಣೆ ಮಾಡುವ ಕೆಲಸ ಕಾರವಾರ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ಅಂಗನವಾಡಿ ನೌಕರರ ಸ್ವತಂತ್ರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾ ಶೇಟ್ ಅಪಾದಿಸಿದರು.

ಕಾರವಾರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅವಧಿಯಲ್ಲಿ ಇಂತಹ ನಿಯಮಕ್ಕೆ ವಿರುದ್ಧವಾದ ಕೆಲಸ ನಡೆಯುತ್ತಿದೆ. ಹೊನ್ನಾವರ, ಕಾರವಾರ, ಮುಂಡಗೋಡ ದಲ್ಲಿ ಇಂತಹ ಕಾರ್ಯವಾಗಿದೆ ಎಂದರು.
ಸಹಾಯಕಿ ಹುದ್ದೆಯಿಂದ ಕಾರ್ಯಕರ್ತೆ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಿದ್ದರೂ ಬೇರೆಡೆಯಿಂದ ಕಾರ್ಯಕರ್ತೆಯರನ್ನು ನೇಮಕಗೊಳಿಸುವ ಕೆಲಸ ನಡೆದಿದೆ. ನಿಯಮ ಮೀರಿ ಮಾಡಲಾದ ವರ್ಗಾವಣೆ ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಗರ್ಭಿಣಿಯರಿಗೆ ಅಂಗನವಾಡಿಗಳ ಮೂಲಕ ನೀಡಲಾಗುವ ಪೌಷ್ಟಿಕ ಆಹಾರದಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಈ ಬಗ್ಗೆಯೂ ದೂರು ನೀಡಲಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ಧ್ವನಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಸಂಗಮೇಶ್ವರ, ಇತರರು ಉಪಸ್ಥಿತರಿದ್ದರು.

Latest Indian news

Popular Stories