Uttara Kannada

ಉತ್ತರ ಕನ್ನಡ | ಫೆ.24-24 ಕದಂಬೋತ್ಸವ ಆಚರಣೆ : ಸಚಿವ ವೈದ್ಯ ನೇತೃತ್ವದ ಸಭೆಯಲ್ಲಿ ನಿರ್ಧಾರ

ಕಾರವಾರ: ಫೆ.24-24 ಕದಂಬೋತ್ಸವ ಆಚರಣೆ : ಸಚಿವ ಮಂಕಾಳು ವೈದ್ಯ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

ಪ್ರತಿ ವರ್ಷದಂತೆ ಈ ವರ್ಷ ಪಂಪ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪಂಪ ಪ್ರಶಸ್ತಿ ಈ ಸಲ ಯಾರಿಗೆ ಎಂಬ ಕುತೂಹಲ ಸಹ ಈಗ ಸಾಹಿತ್ಯ ವಲಯದಲ್ಲಿದೆ. ಫೆ.24 – 25 ರಂದು ಬನವಾಸಿಯಲ್ಲಿ ಎರಡು ದಿನ ಕದಂಬೋತ್ಸವ ನಡೆಯಲಿದೆ. ಮುಖ್ಯಮಂತ್ರಿ ಸಿದ್ಧಾರಾಮಯ್ಯ ನವರು ಕದಂಬೋತ್ಸವ ಉದ್ಘಾಟನೆಗೆ ಕರೆಸಲು ಸಭೆ ನಿರ್ಧರಿಸಿತು. ದಕ್ಷಿಣ ಭಾರತದ ಖ್ಯಾತ ಕಲಾವಿದರು, ಸಂಗೀತ ಸಂಜೆ ನಡೆಸುವವರು,‌ಖ್ಯಾತ ನೃತ್ಯ ಕಲಾವಿದರು, ಸ್ಥಳೀಯ ಡೊಳ್ಳು ಕುಣಿತ,‌ಸಿದ್ದಿ ದಮಾಮಿ ನೃತ್ಯ, ಹಾಲಕ್ಕಿ ಕಲೆ ಪ್ರದರ್ಸನಕ್ಕೆ ಒತ್ತು ನೀಡಲು ಸಭೆ ನಿರ್ಧರಿಸಿತು.‌ಬನವಾಸಿ ಅಭಿವೃದ್ಧಿಗೆ ಒತ್ತು ನೀಡಲು ಶಾಸಕ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್ ಸಭೆಯಲ್ಲಿ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ , ಶಿರಸಿ ಎಸಿ, ಶಿರಸಿ ಆಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button