ಕಾರವಾರ : ದಾಂಡೇಲಿ ಪುರಸಭೆ ಅಧಿಕಾರಿಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣ ಗೌಡ ಬಣ) ಕಾರ್ಯಕರ್ತರು ವಕೀಲರೊಬ್ಬರ ಕನ್ನಡ ಬೋರ್ಡ್‌ನ್ನು ಅಕ್ರಮವಾಗಿ ತೆಗೆದಿರುವ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ದಾಂಡೇಲಿ ಸಿವಿಲ್ ಜಡ್ಜ್ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ರೋಹಿಣಿ ಡಿ.ಬಸಾಪುರ್ ಅವರು ದಾಂಡೇಲಿ ಪೊಲೀಸರಿಗೆ ಆದೇಶ ನೀಡಿದ್ದಾರೆ.
ದಾಂಡೇಲಿಯ ಮಹಿಳಾ ವಕೀಲೆ ಜಯಾ ದಾಮೋದರ ನಾಯ್ಕ ಅವರು ತಮ್ಮ ಕನ್ನಡ ನಾಮ ಫಲಕವನ್ನು ಕ.ರ.ವೇ (ನಾರಾಯಣ ಗೌಡ ಬಣ) ದವರು ಕಿತ್ತೆಸಿದಿದ್ದಾರೆ. ಇದಕ್ಕೆ ಪುರಸಭೆಯ ಕೆಲ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಧೀಶರಿಗೆ ದೂರು ನೀಡಿದ ನಂತರ, ದೂರು ದಾಖಲಿಸಲು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸಿವಿಲ್ ಜಡ್ಜ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ದೂರು ದಾಖಲಿಸಿಕೊಂಡು, ಅಡಿಶನಲ್ ಎಸ್ಪಿ ಅಥವಾ ಡಿ ವೈಎಸ್ಪಿ ದರ್ಜೆಯ ಅಧಿಕಾರಿಗಳು ತನಿಖೆ ನಡೆಸಿ , ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಫೆ. 9 ರಂದು ಆದೇಶ ಮಾಡಿದ್ದಾರೆ .
ನ್ಯಾಯಾಧೀಶರ ಆದೇಶದ ಪ್ರಕಾರ, ಮಹಿಳಾ ವಕೀಲೆ ಜಯಾ ನಾಯ್ಕ್ ಅವರು ದೂರು ನೀಡಿದ ನಂತರ ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆ.
ಸರ್ಕಾರದ ಆದೇಶ ಇಲ್ಲದಿರುವಾಗ
ದೊಂಬಿ ಮತ್ತು ಗದ್ದಲ ದಂತಹ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲದೆ ಹೋದರೆ , ಅವು ದಿನದಿಂದ ದಿನಕ್ಕೆ ಹೆಚ್ಚಾಗುತ್ತವೆ ಮತ್ತು ಅದು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ,” ಎಂದು ಪೊಲೀಸರಿಗೆ ಸೂಚಿಸಿದ್ದಾರೆ.
“ಕರ್ನಾಟಕ ಕ್ರಿಮಿನಲ್ ರೂಲ್ಸ್ ಆಫ್ ಪ್ರಾಕ್ಟೀಸ್ 1968 ರ ಅಧ್ಯಾಯ 5, ನಿಯಮ 2 ರ ಪ್ರಕಾರ, ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಹಿರಿಯ ಶ್ರೇಣಿಯ ಪೊಲೀಸ್ ಅಧಿಕಾರಿಯು ತನಿಖೆ ನಡೆಸುವಂತೆ ನಿರ್ದೇಶಿಸಿದ್ದಾರೆ.
ಈತನ್ಮಧ್ಯೆ ನಗರಸಭೆ, ಪುರಸಭೆಗಳ ಮೇಲಾಧಿಕಾರಿಯಾಗಿರುವ ಜಿಲ್ಲಾ ನಗರಾಭಿವೃದ್ಧಿ ಕೋಶ ,ಯೋಜನಾ ನಿರ್ದೇಶಕರಿಗೆ ದೂರು ನೀಡಿರುವ ವಕೀಲೆ ಜಯಾ.ಡಿ.ನಾಯ್ಕ ಅವರು
ಕರ್ನಾಟಕ ನಾಗರಿಕ ಸೇವಾ ನಿಯಮಗಳು 2021 ರ ಅಡಿಯಲ್ಲಿ ದಾಂಡೇಲಿಗೆ ನಗರಸಭೆಯ ಪೌರಾಯುಕ್ತರು ಹಾಗೂ ನಾಮಫಲಕ ಕೀಳುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಗರಸಭೆ ಕೆಲ ಸಿಬ್ಬಂದಿಗಳ ವಿರುದ್ಧ ಇಲಾಖಾ ತನಿಖೆ ನಡೆಸಿ , ಶಿಸ್ತು ಕ್ರಮ ಕೈಗೊಂಡು ತಮಗೆ ನ್ಯಾಯಾಕೊಡಿಸಬೇಕೆಂದು ಲಿಖಿತ ದೂರು ಸಲ್ಲಿಸಿದ್ದಾರೆ. ದಾಂಡೇಲಿ ನಗರಸಭೆಯ ಪೌರಾಯುಕ್ತರು ಹಾಗೂ ಆರೋಪ ಹೊತ್ತಿರುವ ಕೆಲ ಸಿಬ್ಬಂದಿ ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕು ಮತ್ತು ಜನರಿಗೆ ಸೇವೆ ಸಲ್ಲಿಸಬೇಕು. ಅವರು ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಮತ್ತು ಅಸಡ್ಡೆಯಿಂದ ವರ್ತಿಸುವಂತಿಲ್ಲ. ಜನವರಿ 2, 2024 ರಂದು ಯಾವುದೇ ನಿಯಮಗಳು ಅಥವಾ ಸರ್ಕಾರಿ ಆದೇಶವಿಲ್ಲದೆ ಅವರು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸ್ಥಳೀಯ ಅಧ್ಯಕ್ಷ ಸಾದಿಕ್ ಮುಲ್ಲಾ ಅವರೊಂದಿಗೆ ಕೈಜೋಡಿಸಿ ಈ ಕ.ರ.ವೇ ಗುಂಪಿನ ಆದೇಶವನ್ನು ಪಾಲಿಸಿದ್ದಾರೆ. ಕಮಿಷನರ್, ರಾಜಾರಾಮ್ ಪವಾರ್ ಮತ್ತು ಇತರ ಮೂವರು ಕ.ರಾ.ವಿ ಕಾರ್ಯಕರ್ತರಂತೆ ವರ್ತಿಸಿದ್ದು ಮತ್ತು ಕನ್ನಡದಲ್ಲಿದ್ದ ನನ್ನ ಹೆಸರಿನ ನಾಮಫಲಕ ಕಿತ್ತೆಸಿದಿದ್ದಾರೆ .ಇದಕ್ಕೆ ಸಾಕ್ಷಿಯಾಗಿ ಸಿಸಿ ಟಿವಿ ಪೂಟೇಜ್ ಗಳಿವೆ ಯೋಜನಾ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. “ಇದು ಅಧಿಕಾರದ ದುರುಪಯೋಗ ಮತ್ತು ನಿಯಮಗಳು ಮತ್ತು ಕಾನೂನಿನ ಉಲ್ಲಂಘನೆಯಲ್ಲದೆ ಬೇರೇನೂ ಅಲ್ಲ. ನನ್ನ ಕಛೇರಿಯಲ್ಲಿ ಕನ್ನಡ ಭಾಷೆಯಲ್ಲಿದ್ದ ಬೋರ್ಡ್ ಅನ್ನು ಅವರು ಕಿತ್ತು ಹಾಕಿದರು ಮತ್ತು ಈ ಬಗ್ಗೆ ಪ್ರಶ್ನಿಸಿದಾಗ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆ ಮತ್ತು ಸ್ಥಳೀಯ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ, ”ಎಂದು ಜಯ ನಾಯ್ಕ್ ತಮ್ಮ ಪತ್ರದಲ್ಲಿ ನ್ಯಾಯಾಧೀಶರಿಗೆ ಸಹ ದೂರು ನೀಡಿದ್ದು ಇಲ್ಲಿ ಸ್ಮರಣಾರ್ಹ.
…….