ಖಾನಾಪುರ : ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಆದ ಬಳಿಕ ಜನರ ಸಂಪರ್ಕಕ್ಕೂ ಸಿಗದೆ
ಕೆಲ ವರ್ಷದಿಂದ ದೂರವಿದ್ದ ಸಂಸದ ಅನಂತಕುಮಾರ ಹೆಗಡೆ ಖಾನಾಪುರಕ್ಕೆ ಭೇಟಿ ನೀಡಿದ ವೇಳೆ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಇಂದು ಖಾನಾಪುರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು ಸಂಸದರ ಎದುರೆ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ನಿನ್ನೆ ಬುಧವರ ಬೆಳಗಾವಿ ಜಿಲ್ಲೆಯ ಖಾನಾಪುರನಲ್ಲಿ ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ ಕಾರ್ಯಕರ್ತರು. ಕಳೆದ ಹಲವು ವರ್ಷಗಳಿಂದ ಕಾರ್ಯಕರ್ತರ ಕೈಗೆ ನೀವು ಸಿಕ್ಕಿಲ್ಲ. ನಿಮ್ಮ ಆಪ್ತ ಸಹಾಯಕರು ಕೂಡ ಸರಿಯಾಗಿ ಸ್ಪಂದಿಸಿಲ್ಲ,ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಕ್ಷೇತ್ರದಲ್ಲಿನ ಸಮಸ್ಯೆಗಳ ಪಟ್ಟಿಯನ್ನ ಸಂಸದರ ಮುಂದಿಟ್ಟು ಅಸಮಾಧಾನ ಹೊರ ಹಾಕಿದರು. ಖಾನಾಪುರ ತಾಲೂಕಿನ ಜನ ಬೆಳಗಾವಿಗೆ ಹೋದರೆ ಕಾರವಾರ ಹೋಗಿ ಅಂತಾರೆ.ಕಾರವಾರ ಹೋದರೆ ನೀವು ಬೆಳಗಾವಿ ಜಿಲ್ಲೆಯವರು ಅಲ್ಲಿಗೆ ಹೋಗಿ ಅಂತಾರೆ. ಇದರಿಂದಾಗಿ ಖಾನಾಪುರ ತಾಲೂಕಿನ ಜನ ಒದ್ದಾಡುವಂತಾಗಿದೆ..
ಆರು ಬಾರಿ ಸಂಸದರಾಗಿದ್ದಿರಿ ಖಾನಾಪುರದಲ್ಲಿ ಕೇಂದ್ರ ಸರ್ಕಾರದ ಯೋಜನೆ ಎನೂ ತಂದಿಲ. ಕಾರ್ಯಕರ್ತರಿಗೆ ನಿಮ್ಮ ಕಡೆಯಿಂದ ಸ್ಪಂದನೆ ಸಿಗುತ್ತಿಲ್ಲ.ಅನಂತಕುಮಾರ್ ಹೆಗಡೆ ಎಲ್ಲಿದ್ದಾರೆ ಅಂತಾ ಜನ ಪ್ರಶ್ನೆ ಮಾಡ್ತಿದ್ದಾರೆ. ನಿಮ್ಮನ್ನ ಭೇಟಿಯಾಗಲು ನಾವು ಇಲ್ಲಿದ್ದಂ ,200ಕಿ.ಲೋ ಮಿ ಬಂದರು ಸಿಗುವುದಿಲ್ಲ.
ನಾನು ಚುನಾವಣೆಗಾಗಿ ಬಂದಿಲ್ಲ.
ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದ ಅನಂತಕುಮಾರ ಹೆಗಡೆ ಅವರು ನಾನು ಈಗ ಇಲ್ಲಿಗೆ ಬಂದಿರುವುದು ಚುನಾವಣೆಗಾಗಿ ಅಲ್ಲ. ಹೈಕಮಾಂಡ ಟಿಕೆಟ್ ಯಾರಿಗೆ ಕೊಡತ್ತಾರೆ ಎನ್ನುದು ಗೊತ್ತಿಲ್ಲ.ಆದರೆ ಮೋದಿ ಅವರನ್ನ ಮೊತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎನ್ನುವುದು ನನ್ನ ಉದ್ದೇಶ,ಆ ಕಾರಣಕ್ಕಾಗಿ ಎಲ್ಲಾ ಕಡೆ ಓಡಾಟ ನಡೆಸುತ್ತಿದ್ದೆನೆ.ಕೆಲವೊಂದು ನನ್ನ ವೈಯಕ್ತಿಕ ಕಾರಣದಿಂದ ಓಡಾಟ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.