Uttara Kannada

ಉತ್ತರ ಕನ್ನಡ: ಸಿದ್ಧರ ಗ್ರಾಮದಲ್ಲಿ ಚಿರತೆ ದಾಳಿ : ಎಮ್ಮೆ ಕರು ಬಲಿ

ಕಾರವಾರ: ಕಾರವಾರ ತಾಲೂಕಿನ ಸಿದ್ಧರ ಗ್ರಾಮದಲ್ಲಿ ಮನೆಯ ಹಿತ್ತಲಲ್ಲಿ ಕಟ್ಟಿದ್ದ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಮನೋಹರ ಗಾಂವ್ಕರ್ ಎಂಬ ಪ್ರಗತಿಪರ ರೈತರು ತಮ್ಮ ಮನೆಯ ಹಿಂದೆ ದನದ ಕೊಟ್ಟಿಗಯಲ್ಲಿ ಎಮ್ಮೆ ಕರು ಕಟ್ಟಿದ್ದರು‌ . ಕಾಡಿಗೆ ಹೊಂದಿಕೊಂಡಿರು ಗದ್ದೆ ಹಾಗೂ ತೋಟಕ್ಕೆ ಆಹಾರ ಅರಸಿ ಬಂದ ಚಿರತೆ ಎಮ್ಮೆ ಕರುವನ್ನು ತಿಂದು ಹಾಕಿರುವುದು ಇಂದು ಬೆಳಿಗ್ಗೆ ಮನೋಹರ ಅವರ ಗಮನಕ್ಕೆ ಬಂದಿದೆ. ತಕ್ಷಣ ಅವರು ಕಾರವಾರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರಿಗೆ ಚಿರತೆ ದಾಳಿ ಬಗ್ಗೆ ಮಾಹಿತಿ ನೀಡಿದರು.
ಅರಣ್ಯಾಧಿಕಾರಿ ರಾಘವೇಂದ್ರ ಕರುವಿನ ಮೇಲೆ ಚಿರತೆ ದಾಳಿಯನ್ನು ಖಚಿತ ಪಡಿಸಿದರು‌ . ಗ್ರಾಮಸ್ಥರಲ್ಲಿ ಹುಲಿ ದಾಳಿ ಎಂಬ ಸಂಶಯವನ್ನು ಹೋಗಲಾಡಿಸಿದರು. ಚಿರತೆಗಳು ಆಹಾರ ಹುಡುಕಿ ಕಾಡಂಚಿನ ಗ್ರಾಮಗಳಿಗೆ ಬರುವುದು ಸಹಜ ಎಂದು ಆರ್ ಎಫ್ ಓ ಹೇಳಿದರು‌ .
…..

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button