Uttara KannadaFeatured Story

ಉತ್ತರ ಕನ್ನಡ | ಬಿಜೆಪಿಯವರು ಗಲಭೆ ಮಾಡದೇ ಯಾವ ಎಲೆಕ್ಷನ್ ಗೆದ್ದಿದ್ದಾರೆ ? | ಸಚಿವ ಮಂಕಾಳು ವೈದ್ಯ

ಕಾರವಾರ : ಬಿಜೆಪಿಯವರು ಗಲಭೆ ಮಾಡದೇ ಯಾವ ಎಲೆಕ್ಷನ್ ಗೆದ್ದಿದ್ದಾರೆ . ಅವರು ಎಲೆಕ್ಷನ್‌ಗೋಸ್ಕರ ಏನ್ ಬೇಕಾದ್ರೂ ಮಾಡೋದಕ್ಕೆ ರೆಡಿಯಿದ್ದಾರೆ ಎಂದು ರಾಜ್ಯದ ಮೀನುಗಾರಿಕಾ ಮತ್ತು ಬಂದರು ,ಜಲ ಸಾರಿಗೆ ಸಚಿವ ಮಂಕಾಳು ವೈದ್ಯ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು‌.

ಕಾರವಾರದಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದರು‌. ಬಿಜೆಪಿಯವರಿಗೆ ಮೂರು ಅಜಂಡವಗಳಿವೆ.
ಸುಳ್ಳು ಹೇಳೋದು, ಗಲಭೆ ಮಾಡೋದು, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು ಎಂದು ಸಚಿವ ವೈದ್ಯ ಟೀಕಿಸಿದರು.

ರಾಮನ ನಿಜ ಭಕ್ತರಾದರೇ ಬಿಜೆಪಿ ಹೀಗೆ ಮಾಡುತ್ತಿರಲಿಲ್ಲ.
ನಾನು‌ ಕೂಡಾ ಶ್ರೀ ರಾಮನ ಭಕ್ತ. ನಾನು ಭಟ್ಕಳದಲ್ಲಿ ರಾಮ ಮಂದಿರ ಕಟ್ಟಿಸಿದ್ದೇನೆ. ಶ್ರೀರಾಮ ಸಮಸ್ತ ಹಿಂದುಗಳ ಆರಾಧ್ಯ. ಕೇವಲ ಬಿಜೆಪಿಗೆ ಮಾತ್ರ ಅಲ್ಲ ಎಂದರು‌ .

ರಾಮಮಂದಿರ ಉದ್ಘಾಟನೆ ಆಗದೇ ಮಂತ್ರಾಕ್ಷತೆ ಕೊಡುತ್ತಿದ್ದಾರೆ .ಪೂಜೆಯೇ ಆಗದೇ ಮಂತ್ರಾಕ್ಷತೆ ಹೇಗೆ ಕೊಡುತ್ತಾರೆ ? ಎಂದು ಸಚಿವರು ಪ್ರಶ್ನೆ ಎತ್ತಿದರು. ರಾಮ ಮಂದಿರ ಉದ್ಘಾಟನೆಗೆ ಅಕ್ಷತೆ ಕೊಟ್ಟು , ಮಂತ್ರಾಕ್ಷತೆ ಕೊಟ್ಟು ಕರೆಯುವುದೇನೋ ಸರಿ, ಮೋದಿ ಪೋಟೋ ಹಾಕಿ ಪ್ರಚಾರ ಮಾಡುವುದು ಏಕೆ ? ಇದು ರಾಜಕೀಯ ಲಾಭಕ್ಕಾಗಿ ಅಲ್ಲವೇ ? ಎಂದು ಸಚಿವ ಪ್ರಶ್ನಿಸಿದರು.

ಅಕ್ಷತೆ ಕೊಡುವಾಗ ಮೋದಿ ವಿಚಾರ ಏಕೆ ಹೇಳುತ್ತಾರೆ, ಯಾಕೆ ಮೋದಿ, ಯೋಗಿಯ ಫೋಟೋ ಕಟೌಟ್ ಹಾಕಿದ್ದಾರೆ ಎಂಬುದು ಜನರಿಗೆ ಅರ್ಥವಾಗುತ್ತಿದೆ.‌

ಮಂದಿರಕ್ಕೆ ಯಾರ ದುಡ್ಡು ? ಸಾರ್ವಜನಿಕರು ನೀಡಿದ ಹಣ ಅದು‌ . ನಾವು ಕೂಡ ಮಂದಿರ ನಿರ್ಮಾಣಕ್ಕೆ ಹಣ ಕೊಟ್ಟಿದ್ದೇವೆ ಎಂದ ಸಚಿವ ವೈದ್ಯ , ಈಗ ನಡೆಸಿರುವ ನಾಟಕವನ್ನು ಬಿಜೆಪಿಯವರು ಬಂದ್ ಮಾಡುವುದು ಒಳ್ಳೆಯದು ಎಂದರು.‌

ಬಿಜೆಪಿಯವರದ್ದು ಬೋಗಸ್ ಭಕ್ತಿ. ನಿಜವಾದ ಭಕ್ತರು ಗಲಾಟೆ ಮಾಡುವುದಿಲ್ಲ. ರಾಜ್ಯದಲ್ಲಿ ನಾವು ಕೂಡ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button