ಪೌರ ಕಾರ್ಮಿಕರ ಜೊತೆ ಲುಂಗಿ ಡ್ಯಾನ್ಸ್ ಹಾಡಿಗೆ ಹೆಜ್ಜೆ ಹಾಕಿದ ಕಾರವಾರ ಶಾಸಕ ಸತೀಶ್ ಸೈಲ್

ಕಾರವಾರ: ಪೌರ ಕಾರ್ಮಿಕರ ಜೊತೆ ಲುಂಗಿ ಡ್ಯಾನ್ಸ್ ಹಾಡಿಗೆ ಕಾರವಾರ ಶಾಸಕ ಸತೀಶ್ ಸೈಲ್ ಹೆಜ್ಜೆ ಹಾಕಿದ ಪ್ರಸಂಗ ಸೋಮವಾರ ಕಾರವಾರದ ಮಯೂರ ವರ್ಮ ವೇದಿಕೆಯ ಮುಂದೆ ನಡೆಯಿತು. ಜಿಲ್ಲೆಯ 127 ಪೌರ ಕಾರ್ಮಿಕರಿಗೆ ಖಾಯಾಂತಿ ನೇಮಕ ಪತ್ರ ವಿತರಣೆ ಸಮಾರಂಭ ಕಾರವಾರದ ಮಯೂರ ವರ್ಮ ವೇದಿಕೆಯಲ್ಲಿ ನಡೆದಿತ್ತು.

ಗುತ್ತಿಗೆ ಕಾರ್ಮಿಕರಿಗೆ ಖಾಯಂ ಮಾಡಿದ ನೇಮಕ ಪತ್ರವನ್ನು ಸರಕಾರದ ಆದೇಶ ದಂತೆ ಜಿಲ್ಲಾಧಿಕಾರಿ ವಿತರಿಸಿದರು.
ಈ ವೇಳೆ ಸಚಿವ ಮಂಕಾಳು ವೈದ್ಯ,
ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಉಪಸ್ಥಿತರಿದ್ದು ಸ್ವಚ್ಚತಾ ಕಾರ್ಮಿಕರ ಅರಿವು ಸಮಾಗಮದಲ್ಲಿ ಭಾಗವಹಿಸಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಗುಂಪಲ್ಲಿ ತೆರಳಿ ಸ್ಟೆಪ್ ಹಾಕುವ ಮೂಲಕ ಶಾಸಕ ಸತೀಶ್ ಸೈಲ್ ಗಮನ ಸೆಳೆದರು.

Latest Indian news

Popular Stories