
” ನೀಟ್ ” ಪ್ರವೇಶ ಪರೀಕ್ಷೆಗೆ ಬಳೆ, ಮೂಗುತಿ, ಓಲೆ, ಕಾಲುಗೆಜ್ಜೆ ನಿಷೇಧ: ಹೊಸ ರಾಷ್ಟೀಯ ಪರೀಕ್ಷಾ ಭದ್ರತಾ ನೀತಿ ಜಾರಿಗೆ ಆಗ್ರಹ : ರವೀಂದ್ರ ನಾಯ್ಕ
ಕಾರವಾರ : ರೈಲ್ವೆ ಪರೀಕ್ಷೆಯಲ್ಲಿ ನಿಷೇಧಿಸಿದಂತೆ, ವೈದ್ಯಕೀಯ ಪ್ರವೇಶಕ್ಕೆ ರಾಷ್ಟೀಯ ಪರೀಕ್ಷಾ ಮಂಡಳಿಯಿಂದ ಜರುಗಲಿರುವ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್ಗೆ) ಬಳೆ, ಮೂಗುತಿ, ಓಲೆ, ಕಾಲುಗೆಜ್ಜೆ ಮುಂತಾದವುಗಳನ್ನು ನಿಷೇಧಿಸಿರುವದರಿಂದ, ಪರೀಕ್ಷಾ ಭದ್ರತೆಗೆ ಸಂಬಂಧಿಸಿ ಏಕರೂಪದ ರಾಷ್ಟೀಯ ಭದ್ರತಾ ನೀತಿ ಜಾರಿಗೆ ಸಾಮಾಜಿಕ ಹೋರಾಟಗಾರರ ರವೀಂದ್ರ ನಾಯ್ಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇತ್ತೀಚಿಗೆ ಜರುಗಿದ ಕೇಂದ್ರ ಸರ್ಕಾರದ ರೈಲ್ವೆ ಮಂಡಳಿಯು ಮಂಗಳಸೂತ್ರ, ಜನಿವಾರ, ಬಂಗಾರದ ಆಭರಣ ನಿಷೇಧಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯವು ಪೂರಕವಾದ ಆದೇಶ ಹೊರಡಿಸಿತ್ತು. ಮೇ ೪ ರಂದು ಜರುಗಲಿರುವ ವೈದಕೀಯ ಪ್ರವೇಶಕ್ಕೆ ರಾಷ್ಟೀಯ ಪರೀಕ್ಷಾ ಮಂಡಳಿ ಧಾರ್ವಿಕ ಭಾವನೆಗೆ ಧಕ್ಕೆ ಉಂಟಾಗುವ ಕಾಲುಗೆಜ್ಜೆ, ಮೂಗುತಿ, ಕಿವಿ ಓಲೆ, ಬಳೆ, ಸರ, ಲೋಹದ ಆಭರಣ ಮುಂತಾದವುಗಳನ್ನು ನೀಟ್ (ಯು.ಜಿ-೨೦೨೫ ರ) ಮಾಹಿತಿ ಕೈಪೀಡಿಯಲ್ಲಿ ಉಲ್ಲೇಖಿಸಿದಂತ ವಸ್ತುಗಳನ್ನು ಪರೀಕ್ಷಾ ಕೊಠಡಿಯಯಿಂದ ನಿಷೇಧಿಸಲಾಗಿದೆ ಎಂದು ಪರೀಕ್ಷಾರ್ಥೀಗಳಿಗೆ ನೀಡಿದ ಪರೀಕ್ಷಾ ಪ್ರವೇಶ ಪತ್ರದಲ್ಲಿ ತಿಳಿಸಲಾಗಿದೆ ಅವರು ಹೇಳಿದ್ದಾರೆ.
ವ್ಯತಿರಿಕ್ತವಾದ ಆದೇಶ :
ದೇಶದಲ್ಲಿ ಜರುಗುವ ಪ್ರವೇಶ ಪರೀಕ್ಷೆಗೆ ವ್ಯತಿರಿಕ್ತವಾದ ಆದೇಶ ಹಾಗೂ ಏಕರೂಪದ ಪರೀಕ್ಷಾ ಭದ್ರತಾ ನಿಯಮಗಳು ಇಲ್ಲದಿರುವದರಿಂದ, ಇಂತಹ ಗೊಂದಲಗಳು ಪದೇ,ಪದೇ ಪುನರಾವರ್ತನೆಗೊಳ್ಳುತ್ತದೆ. ಕೇಂದ್ರ ಸರ್ಕಾರದ ನಿಯಮಾವಳಿಯಲ್ಲಿ ರಾಜ್ಯ ಸರ್ಕಾರ ಪ್ರವೇಶ ಪರೀಕ್ಷೆ ಜರುಗಿಸುವುದು ಅನಿವಾರ್ಯ. ಆದ್ದರಿಂದ ಕೇಂದ್ರ ಸರ್ಕಾರವು ರಾಷ್ಟೀಯ ಪರೀಕ್ಷಾ ನೀತಿಯ ಮೂಲಕ ಧಾರ್ಮಿಕ ಭಾವನೆಗೆ ಆತಂಕವಾಗದAತೆ ಸಮಗ್ರವಾಗಿ ಅಧ್ಯಯನದೊಂದಿಗೆ ಹೊಸ ರಾಷ್ಟೀಯ ಪರೀಕ್ಷಾ ನೀತಿ ಜಾರಿಗೆ ತರುವುದು ಅನಿವಾರ್ಯ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
…




