ಕೂರ್ವೆ ದ್ವೀಪದ ಜನ ದೋಣಿಯಲ್ಲಿ ಬಂದು ಮತದಾನ

ಕಾರವಾರ : ಕೂರ್ವೆ ದೀಪದ ಮತದಾರರು ದೋಣಿಯಲ್ಲಿ ಗಂಗಾವಳಿ ನದಿ ದಾಟಿ ದಂಡೇಭಾಗ ಗ್ರಾಮಕ್ಕೆ ಬಂದು ಒಂದು ಕಿಮೀ ನಡೆದು ಹಿಚ್ಕಡ ಮತಕೇಂದ್ರದಲ್ಲಿ ಮತ ಚಲಾಯಿಸಿದರು. ಮಧ್ಯಾಹ್ನದ ನಡು ಬಿಸಿಲಲ್ಲಿ ಸಹ ಅವರು ಮತದಾನದ ಉತ್ಸಾಹ ಕಳೆದುಕೊಂಡಿರಲಿಲ್ಲ. ಕಳೆದ ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ಸೇತುವೆ ಬೇಡಿಕೆ ಇಟ್ಟಿದ್ದೇವೆ. ಆದರೆ ನಮ್ಮ ಬೇಡಿಕೆ ಈಡೇರಿಲ್ಲ. ಅಂಕೋಲಾ ತಾಲೂಕಿನ
ಕೂರ್ವೆ ದ್ವೀಪ ಗ್ರಾಮದಲ್ಲಿ 40 ಕುಟುಂಬಗಳಿವೆ .ಮಳೆಗಾಲದಲ್ಲಿ ಗಂಗಾವಳಿಗೆ ಪ್ರವಾಹ ಬರುತ್ತದೆ. ಮೂರು ತಿಂಗಳು ದ್ವೀಪದಲ್ಲಿ ವಾಸ.ನೆರೆ ಬಂದರೆ ಹಿಚ್ಕಡ ಗ್ರಾಮಕ್ಕೆ ಸ್ಥಳಾಂತರ ಬರುವುದಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು ಮಾರುತಿ ಹರಿಕಂತ್ರ ಹಾಗೂ ಕೂರ್ವೆ ನಿವಾಸಿ ಸಾವಿತ್ರಿ. ಆದರೂ ಮತದಾನ ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ನಮಗೆ ಸೇತುವೆ ನಿರ್ಮಿಸಿಕೊಡುವ ಆಶಾ‌ಭಾವನೆ ಈ ದ್ವೀಪ‌ ಗ್ರಾಮದ ಜನರದ್ದು.
……..

Latest Indian news

Popular Stories