ಕಾರವಾರ : ಜಿಲ್ಲಾಧಿಕಾರಿ ಕಚೇರಿ ನುಗ್ಗಲು ಯತ್ನಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್ .ಎಸ್.ಹೆಗಡೆ ಕರ್ಕಿ , ವಿ.ಪ ಸದಸ್ಯ ಉಳ್ವೇಕರ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದರು.
ಪೊಲೀಸ್ ವ್ಯಾನ್ ಗೆ ಹಲವು ಕಾರ್ಯಕರ್ತರ ಹತ್ತಿಸಿದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ನುಗ್ಗುವುದನ್ನು ತಡೆದರು.
ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಕಾರವಾರದಲ್ಲಿ ಬಿಜೆಪಿ ಎಸ್ಸಿ ಎಸ್ಟಿ ಮೊರ್ಚಾದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ಮುಗಿದ ನಂತರ ಈ ಘಟನೆ ನಡೆಯಿತು .
ಎಸ್ಸಿ ಮಾರ್ಚಾದ ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ಮುಕ್ರಿ ಅವರಿಂದ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು . ಜಿಲ್ಲಾ ಬಿಜೆಪಿ ಎಸ್ಸಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ
ನಂದನ ಬೋರ್ಕರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ವಿ.ಪ.ಸದಸ್ಯ ಗಣಪತಿ ಉಳ್ವೇಕರ್ ಭಾಷಣ. ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಬಿಜೆಪಿ ಹಿಂದುಳಿದ ವರ್ಗದ ಪದಾಧಿಕಾರಿಗಳಾದ ರಾಜೇಂದ್ರ ನಾಯ್ಕ, ಕಿಶನ್ ,ಬಿಜೆಪಿ ಕಾರವಾರ ಪದಾಧಿಕಾರಿಗಳು, ನಗರಸಭೆಯ ಬಿಜೆಪಿ ಸದಸ್ಯರು ಪ್ರತಿಭಟನೆಯಲ್ಲಿದ್ದರು.