Uttara Kannada

ಅಪರ ಜಿಲ್ಲಾಧಿಕಾರಿಯಾಗಿ ಸಾಜಿದ್ ಮುಲ್ಲಾ ಅಧಿಕಾರ ಸ್ವೀಕಾರ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸಾಜಿದ್ ಮುಲ್ಲಾ ಅಧಿಕಾರ ಸ್ವೀಕಾರ ಮಾಡಿದರು.

ಜಮಖಂಡಿ ನೀರಾವರಿ ನಿಗಮದ ಭೂ ಸ್ವಾಧೀನ ಅಧಿಕಾರಿಯಾಗಿದ್ದ ಅವರನ್ನು ಸರ್ಕಾರ ಕಾರವಾರ ಜಿಲ್ಲಾ ಅಪರ ಜಿಲ್ಲಾಧಿಕಾರಿಯನ್ನಾಗಿ ವರ್ಗ ಮಾಡಿತ್ತು‌ . ಕಾರವಾರಕ್ಕೆ ವರ್ಗಾವಣೆಯಾದ ಅವರು ಸ್ವಲ್ಪ ತಡವಾಗಿ ಅಧಿಕಾರ ವಹಿಸಿಕೊಂಡರು. 2004 ಕೆಎಎಸ್ ಅಧಿಕಾರಿಯಾದ ಅವರು ಹಲವು ಕಡೆ ತಹಶಿಲ್ದಾರರರಾಗಿ ಕೆಲಸ ಮಾಡಿದ್ದಾರೆ. ಕಾರವಾರದಲ್ಲಿ ಎರಡು ವರ್ಷ ತಹಶಿಲ್ದಾರರಾಗಿ, ಹೊನ್ನಾವರದಲ್ಲಿ ಭೂ ಸ್ವಾಧೀನ ಅಧಿಕಾರಿಯಾಗಿ, ಭಟ್ಕಳದಲ್ಲಿ ಸಹಾಯಕ ಕಮಿಷನರ್ ಆಗಿ ಕೆಲಸ ಮಾಡಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅರಿತವರಾಗಿದ್ದಾರೆ. ಮೂಲತಃ ಅವರು ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಹುಟ್ಟಿ ಬೆಳೆದು , ಅಲ್ಲೇ ಪದವಿತನಕ ಶಿಕ್ಷಣ ಪೂರೈಸಿದ್ದಾರೆ.


ಮೃದು ಸ್ವಭಾವದ ಸಾಜಿದ್ ಮುಲ್ಲಾ ಅವರು ಜನಪರ ಅಧಿಕಾರಿ ಎಂದು ಹೆಸರು ಮಾಡಿದ್ದಾರೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button