ಕಾರವಾರ ಜಿಲ್ಲೆಗೆ ರಾಜ್ಯದಲ್ಲಿ ಐದನೇ ಸ್ಥಾನ : ಶಿರಸಿಗೆ ಎಂಟನೇ ಸ್ಥಾನ

ಕಾರವಾರ : ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು,
ಕಾರವಾರ ಜಿಲ್ಲೆಗೆ ರಾಜ್ಯದಲ್ಲಿ ಐದನೇ ಸ್ಥಾನ ಪಡೆದಿದೆ. ಶಿರಸಿ ಶೈಕ್ಷಣಿ‌ಕ‌ ಜಿಲ್ಲೆಗೆ ಎಂಟನೇ ಸ್ಥಾನ ದೊರೆತಿದೆ. ಕಳೆದ ವರ್ಷ ಉತ್ತರ ಕನ್ನಡದ ಕಾರವಾರ ಶೈಕ್ಷಣಿಕ ಜಿಲ್ಲೆ 13 ನೇ ಸ್ಥಾನ ಪಡೆದಿತ್ತು. ಈ ಸಲ 5 ನೇ ಸ್ಥಾನಕ್ಕೆ ಏರಿದೆ . ಶಿರಸಿ ಶೈಕ್ಷಣಿಕ ಜಿಲ್ಲೆ 23 ನೇ ಸ್ಥಾನದಿಂದ 8 ನೇ ಸ್ಥಾನಕ್ಕೆ ಏರಿದೆ.

ಉತ್ತರಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಾದ ನಗರದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ದರ್ಶನ್‌ ಭಟ್‌, ಗೋಳಿ ಪ್ರೌಢ ಶಾಲೆಯ ಚಿನ್ಮಯ ಹೆಗಡೆ, ಹಾಗೂ ಭೈರುಂಬೆ ಶ್ರೀರಾಮ ಕೆ,ಎಂ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ, ಅದೆ ರೀತಿ ಶಿರಸಿಯ ಗೋಳಿ ಪ್ರೌಢ ಶಾಲೆಯ ತೃಪ್ತಿ ಗೌಡ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಶಾರದಾಂಬಾ ಆಂಗ್ಲ ಮಾಧ್ಯಮ ಭೈರುಂಬೆ ಪ್ರೌಢ ಶಾಲೆಯಲ್ಲಿ ಓದಿದ ಶ್ರೀರಾಮ್‌ ಕೆ ಎಂ 625ಕ್ಕೆ 624 ಅಂಕ ಪಡೆದುಕೊಂಡಿದ್ದಾರೆ,
ಶಿರಸಿಯ ಗೋಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚಿನ್ಮಯ ಶ್ರೀಪಾದ ಹೆಗಡೆ 625 ಕ್ಕೆ 624 ಅಂಕ ಪಡೆದುಕೊಂಡಿದ್ದಾಳೆ ಇನ್ನೂ ಮಾರಿಕಾಂಬಾ ಪ್ರೌಢ ಶಾಲೆಯ ದರ್ಶನ್‌ ಭಟ್‌ ಕೂಡ 625ಕ್ಕೆ 624 ಅಂಕಗಳನ್ನ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನೂ ಶಿರಸಿಯ ಸಿದ್ದಿವಿನಾಯಕ ಪ್ರೌಢಶಾಲೆಯ ತೃಪ್ತಿ ಗೌಡ 625 ಕ್ಕೆ 624 ಅಂಕವನ್ನ ಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ .

ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಉತ್ತಮ ಅಂಕ ಪಡೆದ ಹಿನ್ನೆಯಲ್ಲಿ ವಿದ್ಯಾರ್ಥಿಗಳ ಪಾಲಕರು , ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ನಾಲ್ವರು ವಿದ್ಯಾರ್ಥಿಗಳನ್ನು ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಅಭಿನಂದಿಸಿದ್ದಾರೆ.
……

Latest Indian news

Popular Stories