ಕಾರವಾರ : ನದಿ ಹಿನ್ನೀರು ಗಜನಿ ಈಜಲು ಹೋಗಿ ಅಪಾಯಕ್ಕೆ ಸಿಲುಕ್ಕಿದ್ದ ಇಬ್ಬರೂ ಬಾಲಕರನ್ನ ರಕ್ಷಣೆ ಮಾಡಿರುವ ಘಟನೆ ಸದಾಶಿವಗಡ ಸಮೀಪ ಚಿತ್ತಾಕುಲ ನದಿ ಹಿನ್ನೀರು ಗಜನಿ ಪ್ರದೇಶದಲ್ಲಿ ನಡೆದಿದೆ.
ಇಬ್ಬರೂ ಬಾಲಕರು ಶಾಲೆಗೆ ರಜೆ ಇದ್ದ ಕಾರಣ ಕಾರವಾರ ತಾಲೂಕಿನ ಚಿತ್ತಾಕುಲ ಸಮಿಪದ ನದಿ ಹಿನ್ನೀರಿನಲ್ಲಿ ಈಜಲು ಹೋಗಿದ್ದರು . ಹಿನ್ನೀರಿನ ಆಳದಲ್ಲಿ ಸಿಲುಕೊಂಡು, ಬಾಲಕರು ರಕ್ಷಣೆಗಾಗಿ ಚಿರಾಡುತ್ತಿದ್ದರು. ಹಿನ್ನೀರು ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ದೇವಭಾಗ ಜಂಗಲ್ ರೆಸಾರ್ಟ್ ಸಿಬ್ಬಂದಿ ಪ್ರವೀಣ ಹರಿಕಾಂತ ಎಂಬುವವರು ಬಾಲಕರ ಚಿರಾಡುತ್ತಿರುವುದನ್ನು ಗಮನಿಸಿ , ತಕ್ಷಣ ರಕ್ಷಣೆ ಗೆ ಮುಂದಾದರು. ನೀರಿಗೆ ಜಿಗುದು ಅಪಾಯದಲ್ಲಿ ಇದ್ದ ಇಬ್ಬರೂ ಬಾಲಕರನ್ನ ದಡಕ್ಕೆ ತಂದು, ಪ್ರಥಮ ಚಿಕಿತ್ಸೆ ನೀಡಿದರು. ಇಬ್ಬರು ಬಾಲಕರು ಸುರಕ್ಷಿತವಾಗಿದ್ದಾರೆ. ಪ್ರವೀಣ ಅವರ ಸಮಯ ಪ್ರಜ್ಞೆಗೆ ಕುಟುಂಬದವರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
……