Uttara Kannada

ಉ.ಕ | ಲ್ಯಾಬ್ ಅಸಿಸ್ಟೆಂಟ್ ನೇಣಿಗೆ ಶರಣು

ಕಾರವಾರ ; ಭಟ್ಕಳ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ಶ್ರೀಧರ ಎಂ.ಮೊಗೇರಾ (53) ಲ್ಯಾಬ್ ನಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಬುಧುವಾರ ಬೆಳಕಿಗೆ ಬಂದಿದೆ‌‌. ಶ್ರೀಧರ ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಸಂಬಳ ಕಡಿಮೆ ಇತ್ತು. ಇನ್ಸೆಂಟಿವ್ ಕೊಟ್ಟಿಲ್ಲ ಎಂದು ಜಿಗುಪ್ಸೆ ಗೊಂಡಿದ್ದರು ಎಂದು ಪತ್ನಿ ಮಮತಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡೆತ್ ನೋಟ್ ನಲ್ಲಿ ಪ್ರಿನ್ಸಿಪಾಲ್, ಮ್ಯಾನೆಜ್‌ಮೆಂಟ್‌ ಹಾಗೂ ದಿನೇಶ್ ಶೇಟ್ ಎಂಬುವವರ ಹೆಸರು ಇದ್ದು, ಸಾವಿನ ಬಗ್ಗೆ ಸಂಶಯವಿದೆ. ತನಿಖೆ ಮಾಡಿ ಎಂದು ಭಟ್ಕಳ ಶಹರ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀಧರ ಮುರುಡೇಶ್ವರದ ತೆರನಮಕ್ಕಿಯಲ್ಲಿ ವಾಸವಾಗಿದ್ದರು‌ . ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
…
…..

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button