Uttara Kannada

ಉಳವಿ ರಥೋತ್ಸವಕ್ಕೆ ಹರಿದು ಬಂದ ಲಕ್ಷಾಂತರ ಭಕ್ತರು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಜೊಯಿಡಾ ತಾಲೂಕಿನ ಉಳವಿಯಲ್ಲಿ ಶರಣ ಚೆನ್ನಬಸವಣ್ಣ ರಥೋತ್ಸವ ಭಕ್ತಿ ಸಡಗರ ದಿಂದ ನಡೆಯಿತು. ರಥೋತ್ಸವಕ್ಕೆ ಉತ್ತರ ಕರ್ನಾಟಕದ ಜಿಲ್ಲೆಗಳಾದ, ಬೀದರ, ವಿಜಾಪುರ ,ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ ,ಹಾವೇರಿ ಯಿಂದ ಲಕ್ಷಾಂತರ ಭಕ್ತರು ಆಗಮಿಸಿ ಚೆನ್ನಬಸವಣ್ಣನನ್ನು ಕಣ್ತುಂಬಿಕೊಂಡರು.

ಭಾರತ ಹುಣ್ಣುಮೆಯ ಮರುದಿನ ನಡೆವ ಈ ಜಾತ್ರೆಗೆ ವಚನಸಾಹಿತ್ಯ ಮತ್ತು ಶರಣರ ಭಕ್ತರು ಎತ್ತಿನ ಚಕ್ಕಡಿಗಳ ಮೂಲಕ ಆಗಮಿಸುವುದು ಸಂಪ್ರದಾಯ. ಸಾವಿರಕ್ಕೂ ಹೆಚ್ಚು ಚಕ್ಕಡಿಗಳು ಜಾತ್ರೆಗೆ ಎರಡು ದಿನ ಮುಂಚೆ ಆಗಮಿಸಿ, ರಥೋತ್ಸವದ ನಂತರ ತಮ್ಮ ಊರುಗಳಿಗೆ ಮರಳುತ್ತಾರೆ. ಉಳವಿ ಟ್ರಸ್ಟ ಅನೇಕ ಲಿಂಗಾಯತ ಸಮಾಜದ ಮುಖಂಡರ ನೆರವಿನ ಮೂಲಕ ಹಲವು ಸೌಲಭ್ಯಗಳನ್ನು ಉಳವಿಯಲ್ಲಿ ಮಾಡಿದೆ.

ಇತಿಹಾಸ:
೧೨ ನೇ ಶತಮಾನದಲ್ಲಿ ವಚನಕಾರರು ಮತ್ತು ಶರಣರ ವಿರುದ್ಧ ಕಲ್ಯಾಣದ ಕಲಚುರಿ ವಂಶದ ಅರಸ ಬಿಜ್ಜಳ ,ಪುರೋಹಿತ ಶಾಹಿ ಪಿತೂರಿ ಕಾರಣದಿಂದ , ಬಸವಣ್ಣ ಹಾಗೂ ಶರಣರನ್ನು ಕಲ್ಯಾಣದ ದಿಂದ ಹೊರಡಲು ಆದೇಶಿಸಿದ. ಅಲ್ಲದೆ ಬಸವಣ್ಣ ಅಂತರ್ಜಾತಿ ವಿವಾಹ ಮಾಡಿಸಿದ ಎಂಬ ಕಾರಣಕ್ಕೆ ವಧು – ವರರ ತಂದೆಯರಾದ ಹರಳಯ್ಯ, ಮಧುವರಸರನ್ನು ಆನೆಕಾಲಿಗೆ ಕಟ್ಟಿ ಎಳೆಸಿ, ಕಣ್ಣು ಕೀಳಿಸಿದ . ಈ ಘಟನೆಯಿಂದ ಕಲ್ಯಾಣದಲ್ಲಿ ಕಾಂತ್ರಿಯಾಯಿತು. ಈ ಘಟನೆ ನಂತರ ಚೆನ್ನಬಸವಣ್ಣ, ಸಿದ್ಧರಾಮ, ಅಕ್ಕ ನಾಗಮ್ಮ, ಮಡಿವಾಳ ಮಾಚಿದೇವ ಮುಂತಾದ ನೂರಾರು ಶರಣರು ವಚನ ಸಾಹಿತ್ಯ ಸಮೇತ ಉಳವಿಗೆ ಬಂದರು. ಕಾಲಾನಂತರದಲ್ಲಿ ಚೆನ್ನಬಸವಣ್ಣ ಉಳವಿಯಲ್ಲೇ ಲಿಂಗೈಕ್ಯನಾದ. ಆತನ ಸಮಾಧಿಯನ್ನೇ ದೇವಸ್ಥಾನವನ್ನಾಗಿ ಪೂಜಿಸುತ್ತಾ,ವರ್ಷಕ್ಕೆ ಒಮ್ಮೆ ಜಾತ್ರೆ, ರಥೋತ್ಸವ ಮಾಡುತ್ತಾ ಬರಲಾಗಿದೆ. 800 ವರ್ಷಗಳಿಂದ ಉಳವಿ ಜಾತ್ರೆ ನಡೆಯುತ್ತಾ ಬಂದಿದೆ.

ಪ್ರತಿ ಭಾರತ ಹುಣ್ಣಿಮೆಯ ದಿನ ಜಾತ್ರೆ, ಮರುದಿನ ರಥೋತ್ಸವ ನಡೆಯುವುದು, ಲಕ್ಷಾಂತರ ಭಕ್ತರು ಕರ್ನಾಟಕದ ಮೂಲೆ ಮೂಲೆಯಿಂದ ಬರುವುದು ವಾಡಿಕೆ .ವಿಶೇಷವಾಗಿ ರೈತರು ಉಳವಿ ಜಾತ್ರೆಗೆ ಬರುವುದು ವಿಶೇಷ .
……

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button