
ಉ.ಕ: ಬೈತಖೋಲ ಮಾರ್ಗವಾಗಿ ಬಿಣಗಾ ಕಡೆಗೆ ಹೋಗುವ ಹಳಯ ರಾಷ್ಟ್ರೀಯ ಹೆದ್ದಾರಿಯ ನಿರ್ಬಂಧಿಸಿ ಆದೇಶ
ಕಾರವಾರ ತಾಲ್ಲೂಕಿನ ಬೈತಖೋಲ ಮಾರ್ಗವಾಗಿ ಬಿಣಗಾ ಕಡೆಗೆ ಹೋಗುವ ಹಳಯ ರಾಷ್ಟ್ರೀಯ ಹೆದ್ದಾರಿಯ ಎಡಭಾಗದಲ್ಲಿ ಭಾಗಶ: ಗುಡ್ಡ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಿಂದ ದೊಡ್ಡಗಾತ್ರದ ಬಂಡೆಕಲ್ಲುಗಳು ಹೆದ್ದಾರಿ ಮೇಲೆ ಕುಸಿದು ಬೀಳುವ ಸಂಭವ ಹೆಚ್ಚಿರುತ್ತದೆ. ಈ ಮಾರ್ಗದಲ್ಲಿ ದಿನಂಪ್ರತಿ ರಿಕ್ಷಾ, ಶಾಲಾ ವಾಹನ ಹಾಗೂ ಬಂದರು ಪ್ರದೇಶಕ್ಕೆ ಬರುವ ಭಾರಿ ಗಾತ್ರದ ಟ್ಯಾಂಕರಗಳು, ಅಧಿಕಾರಿಗಳ ವಾಹನಗಳು ಓಡಾಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸದ್ರಿ ರಸ್ತೆಯಲ್ಲಿನ ಸಾರ್ವಜನಿಕ ಸಂಚಾರ ಹಾಗೂ ವಾಹನ
ಸಂಚಾರವನ್ನು ನಿರ್ಬಂಧಿಸಿ ಸುರಂಗ್ ಮಾರ್ಗದ ಮುಖಾಂತರ ತೆರಳಲು ಆದೇಶಿಸಿದ್ದಾರೆ.
ವಾಹನ ಕಾಯ್ದೆ 1989 ರ ಸೆಕ್ಷನ್ 115 ಮತ್ತು ಕರ್ನಾಟಕ ಮೋಟಾರು ವಾಹನಗಳ ನಿಯಮ 1989 ರ ನಿಯಮ 2210(5) .ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸಾರ್ವಜನಿಕ ಸುರಕ್ಷಾತಾ ಹಿತದೃಷ್ಠಿಯಿಂದ ಯಾವುದೇ ರೀತಿಯ ಅಹಿತಕರ
ಘಟನೆಗಳು ತಡೆಯುವ ದೃಷ್ಠಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಬೈತಖೋಲ ಮಾರ್ಗವಾಗಿ
ಬಿಣಗಾ ಕಡೆಗೆ ಹೋಗುವ ಹಳಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ಮತ್ತು ಸಾರ್ವಜನಿಕ ಸಂಚಾರವನ್ನು ಮುಂದಿನ ಆದೇಶದವರೆಗೆ
ನಿರ್ಭಂದಿಸಿ ಆದೇಶಿಸಲಾಗಿದೆ ಎಂದು ಉ.ಕ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.




