
ಕರಾವಳಿ ಕಾವಲು ಪಡೆಯ ಇಂಟರ್ ಸೆಪ್ಟರ್ ಬೋಟ್ ಕಾರ್ಯಾಚರಣೆ ಪ್ರಾರಂಭ ಯಾವಾಗ ?
ಕಾರವಾರ: ಕರಾವಳಿ ಪ್ರದೇಶದಲ್ಲಿ ಕಣ್ಗಾವಲಾಗಿ ಸಂಚರಿಸುವ ಇಂಟರ್ ಸೆಪ್ಟರ್ ಬೋಟ್ ಮಳೆಗಾಲದ ರಜೆಯಲ್ಲಿದೆ. ಸಮುದ್ರ ಪ್ರಕ್ಷುಬ್ಧವಾಗುವ ವೇಳೆ ಇದು ಕಡಲಿಗೆ ಇಳಿಯುವುದಿಲ್ಲ. ಮೀನುಗಾರಿಕಾ ಬೋಟ್ ಗಳಂತೆ ಇಂಟರ್ ಸೆಪ್ಟ ಬೋಟನ ರಜಾ ಅವಧಿ ಮುಗಿದಿದ್ದು,ಅಮವಾಸ್ಯೆ ನಂತರ , ತಾಂತ್ರಿಕ ಟೆಸ್ಟ ನಂತರ ಕಡಲಿಗೆ ಇಳಿಯಲಿದೆ.
ಮೀನುಗಾರಿಕೆ ಬೋಟ್ ತಪಾಸಣೆ ಜೊತೆಗೆ ಕಡಲತೀರದ ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಡುವುದು ಕರಾವಳಿ ಕಾವಲು ಪಡೆಯ ಆಧುನಿಕ ಇಂಟರ್ ಸೆಪ್ಟರ್ ಬೋಟ್ ನ ಕೆಲಸ. ಕರಾವಳಿ ಕಾವಲು ಪಡೆಯ ಮತ್ತೊಂದು ಯಾಂತ್ರಿಕ ಬೋಟ್ ಆಳ ಸಮುದ್ರದಲ್ಲಿ ಚಲಿಸುವ ಸಾಮರ್ಥ್ಯದ್ದಾಗಿದ್ದು, ಅದು ನಿರ್ವಹಣೆಗಾಗಿ ಶೆಡ್ ಸೇರಿದೆ. ನೀರಲ್ಲಿರುವ ಇಂಟರ್ ಸೆಪ್ಟರ್ ಮಳೆಗೆ ರಕ್ಷಣಾ ಹೊದಿಕೆ ತೊಟ್ಟು ನಿಂತಿದೆ. ಅಗಸ್ಟ ೧೫ ರ ವೇಳೆಗೆ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸುವ ಲಕ್ಷಣಗಳಿವೆ ಎಂದು ಕರಾವಳಿ ಕಾವಲು ಪಡೆಯ ಮೂಲಗಳು ತಿಳಿಸಿವೆ.
ಕರಾವಳಿ ಕಾವಲು ಪಡೆ ಸಮುದ್ರಮಾರ್ಗವಾಗಿ ನಡೆಯುವ ಲಿಕ್ಕರ್ ಕಳ್ಳ ಸಾಗಾಣಿಕೆಯ ಮೇಲೆ ಕಣ್ಣಿಡುತ್ತದೆ. ಸಮುದ್ರ ಅಗಸ್ಟ ೧೫ರ ಹೊತ್ತಿಗೆ ಸಹಜ ಸ್ಥಿತಿಗೆ ಬರಲಿದ್ದು,ಕರಾವಳಿ ಕಾವಲು ಪಡೆ ಸಹ ಕರಾವಳಿ ಕಾವಲು ಕಾರ್ಯಾಚರಣೆ ಆರಂಭಿಸಲಿದೆ.
……




