ಭೂತನಾಳ ಕೆರೆಗೆ ನೀರು ಹರಿಸಿ ಭರ್ತಿಗೆ ಕ್ರಮ ವಹಿಸಿ: ಡಿಸಿ ಟಿ.ಭೂಬಾಲನ್ ಸೂಚನೆ

ವಿಜಯಪುರ: ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಭೂತನಾಳ ಕೆರೆಗೆ ನೀರು ಹರಿಸಿ ಭರ್ತಿಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಭೂತನಾಳ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಭೂತನಾಳ ಕೆರೆಗೆ ಪರ್ಯಾಯ ಮಾರ್ಗದಲ್ಲಿ ನೀರು ತುಂಬಿಸಲು ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಭೂತನಾಳ ಕೆರೆಗೆ ನೀತು ತುಂಬಿಸುವ ಕಾರ್ಯ ಆರಂಭಿಸುವಂತೆ ಕೆಬಿಜೆಎನ್ಎಲ್, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ನಂತರ ನಗರದ ಬೇಗಂ ತಲಾಬ್ ಕೆರೆಯನ್ನು ವೀಕ್ಷಣೆ ಮಾಡಿದ ಅವರು, ಅಲ್ಲಿ ಲಭ್ಯವಿರುವ ನೀರನ್ನು ಸಹ ಭೂತನಾಳ ಕೆರೆಗೆ ಸರಬರಾಜು ಮಾಡುವುದು ಅಥವಾ ಬೇಗಂ ತಲಾಬ್ ಕರೆಯಲ್ಲಿ ನೀರು ಶುದ್ಧೀಕರಿಸಿ ನೇರವಾಗಿ ಸರಬರಾಜು ಮಾಡುವ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರೀಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಕಾರ್ಯಕ್ಕೆ ಅಗತ್ಯವಿರುವ ಪಂಪಿಂಗ್ ಯಂತ್ರದ ವ್ಯವಸ್ಥೆಗೆ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ನಂತರ ದರ್ಗಾ ಟಕ್ಕೆ ಕ್ರಾಸ್ ದಿಂದ ಜೊರಾಪೂರ ವಾಟರ ಟ್ಯಾಂಕ ವರೆಗೆ ಲೊಕೊಪಯೋಗಿ ಇಲಾಖೆಯಿಂದ ಅನುಷ್ಟಾನಗೊಳ್ಳುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಅವರು, ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಬಬಲೇಶ್ವರ ನಾಕಾ ಹತ್ತಿರ ಸುಮಾರು ರೂ. 3 ಕೊಟಿಗಳಲ್ಲಿ ನಿರ್ಮಿಸಿದ ಸರದಾರ ವಲ್ಲಭಭಾಯಿ ವಾಣಿಜ್ಯ ಸಂಕಿರ್ಣವನ್ನು ವಿಕ್ಷಣೆ ಮಾಡಿ ಈ ಮಾರುಕಟ್ಟೆಯ ಒಳಗಡೆ ನಿರ್ಮಿಸಲಾಗಿರುವ ಮಳಿಗೆಗಳನ್ನು ಕೂಡಲೇ ಲಿಲಾವಿಗೆ ಕ್ರಮ ವಹಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ವಿಜಯಪುರ ನಗರದ ರಾಮ ನಗರ ರಸ್ತೆ ವಿಕ್ಷಣೆ ಮಾಡಿ ಈ ರಸ್ತೆಯನ್ನು ಸಹ ಆದಷ್ಟು ಬೇಗ ಪೂರ್ಣಗೊಳಿಸುವಂತೆಯೂ ಹಾಗೂ ಮಧ್ಯದಲ್ಲಿರುವ ವಿದ್ಯುತ್ ಬೀದಿ ದೀಪಗಳ ಅಳವಡಿಸುವ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಬದರುದ್ದಿನ ಸೌದಾಗರ, ಕೆಬಿಜೆಎನ್ಎಲ್ ಕಾರ್ಯಪಾಲಕ ಅಭಿಯಂತರರು ಗೋವಿಂದ ರಾಠೋಡ ,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಬಿಯಂತರರಾದ ಗುರುರಾಜ ಬಂಗಿನವರ ಸೇರಿದಂತೆ ಮಹಾನಗರ ಪಾಲಿಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories