ಹನಿ ನೀರಾವರಿಯಿಂದ ಅಧಿಕ ಇಳುವರಿ: ಡಾ.ಬಾಲರಾಜ ರಂಗರಾವ್

ವಿಜಯಪುರ: ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿ ಅಧಿಕ ಇಳುವರಿ ಪಡೆಯಬಹುದು ಎಂದು ವಿಜಯಪುರದ ಉಪ ಕೃಷಿ ನಿರ್ದೇಶಕರಾದ ಡಾ. ಬಾಲರಾಜ ರಂಗರಾವ ಹೇಳಿದರು.

ಅವರು ಜಿಲ್ಲಾ ಕೃಷಿ ತರಬೇತಿ ಕೇಂದ್ರ ವಿಜಯಪುರದಲ್ಲಿ 2023-24 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ (ಸೂಕ್ಷ್ಮ ನೀರಾವರಿ) – ಕೇಂದ್ರ ಪುರಸ್ಕೃತ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕಗಗಳ ಉಪಯೋಗಗಳು ಮತ್ತು ನಿರ್ವಹಣೆ ವಿಷಯದ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಹಾಯಕ ಕೃಷಿ ನಿರ್ದೇಶಕಕಿ ಶ್ರೀಮತಿ ವಿಜಯಲಕ್ಷ್ಮೀ ಎಸ್. ಚವ್ಹಾಣ, ಮಾತನಾಡಿ ತಾಪಮಾನ ಹಾಗೂ ಮಳೆ ಪರಿಸ್ಥಿತಿ ಬಗ್ಗೆ ವಿವರಿಸಿ ಸೂಕ್ಷ್ಮ ನೀರಾವರಿ ಘಟಕಗಗಳ ಮೂಲಕ ನೀರನ್ನು ಮಿತವಾಗಿ ಬಳಕೆ ಮಾಡಲು ತಿಳಿಸಿದರು.
ತರಬೇತಿಯಲ್ಲಿ ನೀರಿನ ಮಿತ ಬಳಕೆ, ವಿವಿಧ ಬೆಳೆಗಳಲ್ಲಿ ನೀರಿನ ಅವಶ್ಯಕತೆ, ವಿವಿಧ ಬೆಳೆಗಳಲ್ಲಿ ವಿವಿಧ ನೀರಾವರಿ ಪದ್ಧತಿಗಳು, ಸೂಕ್ಷ್ಮ ನೀರಾವರಿ ಘಟಕಗಗಳ ಭಾಗಗಳ ಕಾರ್ಯವೈಖರಿ ಮತ್ತು ನಿರ್ವಹಣೆ ಕುರಿತು ವಿವಧ ಅತಿಥಿ ಉಪನ್ಯಾಸಕ ತಜ್ಞರ ಮೂಲಕ ಮಾಹಿತಿ ನೀಡಲಾಯಿತು.
ಎಮ್.ಆರ್. ಮೈದರಗಿ, ಲಿಂಗರಾಜ ತಾಳಿಕೋಟಿ ಮತ್ತು ಶ್ರೀಮತಿ ಗೀತಾ ಭಜಂತ್ರಿ ಉಪಸ್ಥಿತರಿದ್ದರು. ಫಾತಿಮಾಬಾನು ಸುತಾರ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲಕ್ಷ್ಮೀ ಕಾಮಗೊಂಡ ವಂದಿಸಿದರು.

Latest Indian news

Popular Stories