ಹೆಸ್ಕಾಂ: ಫೆ.21ರಂದು ಸಾರ್ವಜನಿಕ ವಿಚಾರಣೆ ಸಭೆ

ವಿಜಯಪುರ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ 2025ರ ಆರ್ಥಿಕ ವರ್ಷದ ವಿದ್ಯುತ್ ದರ ಪರಿಷ್ಕರಣಾ ಅರ್ಜಿ ಕುರಿತು ದಿನಾಂಕ: 21-2-2024ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯ ಪಿ ಬಿ ರಸ್ತೆ, ನವನಗರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿ, ನಿಗಮದ ಕಚೇರಿಯ ನೂತನ ಸಭಾಂಗಣದ ಕೊಠಡಿಯಲ್ಲಿ ಸಾರ್ವಜನಿಕ ವಿಚಾರಣಾ ಸಭೆ ಆಯೋಜಿಸಲಾಗಿದೆ.

ಆಸಕ್ತರು ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಸಲಹೆಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದು ವಿಜಯಪುರದ ಹೆಸ್ಕಾಂನ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Latest Indian news

Popular Stories