ಶಾಸಕ ಯತ್ನಾಳ 3ನೇ ಟಿಪ್ಪು ಸುಲ್ತಾನ: ಸಚಿವ ಎಂ.ಬಿ.ಪಾಟೀಲ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ 3ನೇ ಟಿಪ್ಪು ಸುಲ್ತಾನ ಎಂದು ಸಚಿವ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ತಿರುಗೇಟು ನೀಡಿದರು.

ಸಿದ್ಧರಾಮಯ್ಯ 2ನೇ ಟಿಪ್ಪು ಸುಲ್ತಾನ್ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ವಿಜಯಪುರದಲ್ಲಿಂದು ತಿರುಗೇಟು ನೀಡಿದ ಅವರು, ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ ಅವರು ಸನ್ಮಾನಿಸಿಕೊಂಡ ಫೋಟೊವೊಂದನ್ನು ನನಗೆ ಯಾರೊ ಕಳುಹಿಸಿದ್ದರು ಹೀಗಾಗಿ ನಾವು ಹೇಳುತ್ತೇವೆ ಶಾಸಕ ಯತ್ನಾಳ ಅವರು ಮೂರನೇ ಟಿಪ್ಪು ಸುಲ್ತಾನ ಎಂದರು.

ಟಿಪ್ಪು ಸುಲ್ತಾನರು ಬ್ರೀಟಿಷರ ವಿರುದ್ಧ ಹೋರಾಡಿದವರು ಆ ಇತಿಹಾಸವನ್ನು ಅಳಸಿಹಾಕಲು ಯಾರಿಂದಲು ಆಗುವುದಿಲ್ಲ. ಬ್ರೀಟಿಷರ ವಿರುದ್ಧ ಹೋರಾಡಿದ್ದು ಸತ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಆರ್.ಎಸ್.ಎಸ್ ಕೊಡುಗೆ ಏನು ಇಲ್ಲಾ. ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಯಾರು ಕೂಡ ಭಾಗವಹಿಸಿಲ್ಲ. ಇನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇವರೆಲ್ಲರು ಬ್ರೀಟಿಷರ ಪರವಾಗಿದ್ದರು. ಕಾಂಗ್ರೆಸ್ಸಿಗರು, ರಾಷ್ಟ್ರದ ಜನತೆ ಎಲ್ಲ ವರ್ಗದ ಜನ, ಇನ್ನು ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ ಅಷ್ಟೆ ಅಲ್ಲದೆ ಸ್ವತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ವೀರ ಮರಣಹೊಂದಿದವರ ಲಿಸ್ಟ ಇದೆ ಅದರಲ್ಲಿ ಹಿಂದುಗಳು, ಮುಸ್ಲಿಂರು, ಸಿಖ್ ರು ಸೇರಿದಂತೆ ಎಲ್ಲ ಧರ್ಮದ ಜನರು ಪ್ರಾಣತ್ಯಾಗ ಮಾಡಿ ಅಮರರಾಗಿದ್ದಾರೆ ಹೀಗಾಗಿ ಬಿಜೆಪಿ, ಆರ್.ಎಸ್.ಎಸ್ ನವರು ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ, ಇವರ ಕೊಡುಗೆಯೂ ಇಲ್ಲ ಇಂದು ರಾಷ್ಟ್ರೀಯತೆ ಬಗ್ಗೆ ದೇಶದ ಬಗ್ಗೆ ಅವರು ಮಾತನಾಡುತ್ತಿರುವುದು ವಿಪರ್ಯಾಸ ಎಂದರು.

ಇನ್ನು ಹಿಜಾಬ್ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ. ಹಿಜಾಬ್ ಬ್ಯಾನ್ ಆಗುವ ಮೊದಲು ಸೌಹಾರ್ದಯುತವಾಗಿ ಪರಸ್ಪರ ಹೊಂದಾಣಿಕೆ ಮೂಲಕ ನಡೆಯುತ್ತಿತ್ತು ಅದನ್ನೀಗ ಕದಡಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಜಾತಿ ಧರ್ಮ ಪಕ್ಷ ತೆಗೆದುಕೊಂಡು ಹೋಗಬಾರದು. ಈ ಮೊದಲು ಹೊಂದಾಣಿಕೆಯಿಂದ ಇದ್ದದನ್ನು ಬಿಜೆಪಿಯವರು ಕದಡಿಸಿದ್ದಾರೆ. ಇನ್ನು ಮುಖ್ಯಮಂತ್ರಿಗಳು ಈ ವಿಚಾರ ನ್ಯಾಯಾಲಯದಲ್ಲಿದೆ ಅದನ್ನ ಕಾನೂನಾತ್ಮಕವಾಗಿ ನೋಡಿ ನಿರ್ಧರಿಸುತ್ತಾರೆ ಎಂದರು.

Latest Indian news

Popular Stories