ಕೃಷಿ ವಿಶೇಷ | ತೊಗರಿ ಇಳುವರಿ ಹೆಚ್ಚಿಸುವ ಸಂಕಲ್ಪ

ವಿಜಯಪುರ : ತೊಗರಿ ಇಳುವರಿ ಪ್ರಮಾಣ ವಿಜಯಪುರ ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಲಬುರ್ಗಿ ತೊಗರಿ ಅಭಿವೃದ್ಧಿ ಮಂಡಳಿ ಈ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಹಿಟ್ಟಿನಹಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ವಿಶೇಷ ಸಭೆ ನಡೆಸಿದೆ.
ವಿಜಯಪುರ ಜಿಲ್ಲೆಯಲ್ಲಿ ಕಲಬುರಗಿ ಜಿಲ್ಲೆಗಿಂತ ಕಡಿಮೆ ಇಳುವರಿ ಬರುತ್ತಿರುವ ಕಾರಣಗಳನ್ನು ಕಂಡುಹಿಡಿಯಲು ಕಲಬುರಗಿ ತೊಗರಿ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಂಥೋನಿ ನೇತೃತ್ವದಲ್ಲಿ ತಜ್ಞರ ತಂಡ ಸಮಾಲೋಚನಾ ಸಭೆ ನಡೆಸಿದೆ.

ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ಒಣ ಬೇಸಾಯ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಮಿಲಿಂದ ಪೋತದಾರ, ಡಾ. ಎಸ್. ಎಮ್. ವಸ್ತçದ, ಡಾ. ಎಸ್. ಬಿ. ಪಾಟೀಲ, ಡಾ. ಸಿ. ಡಿ. ಸೋರೆಗಾಂವಿ ಇವರು ವಿಜಯಪುರ ಜಿಲ್ಲೆಯಲ್ಲಿ ತೊಗರಿ ಇಳುವರಿ ಹೆಚ್ಚಳಕ್ಕಾಗಿ ಸಲಹೆ ನಿಡುತ್ತಾ, ಜಿಲ್ಲೆಯಲ್ಲಿ ಸಾಗುವಳಿ ಯೋಗ್ಯ ಜಮೀನು ಕಡಿಮೆ ಆಳದಿಂದ, ಮಧ್ಯಮ ಹಾಗೂ ಹೆಚ್ಚು ಆಳದ ಭೂಮಿಯೆಂದು ವರ್ಗಿಕರಿಸಲಾಗಿದ್ದು, ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕನುಗುಣವಾಗಿ ತಳಿಗಳ ಆಯ್ಕೆ ಮಾಡಬೇಕು ಎಂಬ ಸಲಹೆಯನ್ನು ಮಂಡಿಸಿದರು.

ಜಂಟಿ ಕೃಷಿ ನಿರ್ದೇಶಕ ಡಾ. ಡಿ. ಡಬ್ಲೂ. ರಾಜಶೇಖರ ಇವರು ಸಭೆಯಲ್ಲಿ ಮಳೆಯ ಅನಿಶ್ಚಿತತೆ, ಮಣ್ಣಿನ ಗುಣಧರ್ಮ ಕಡಿಮೆ ಸಾಲು ಅಂತರದಲ್ಲಿ ಬಿತ್ತನೆ, ಬರ ಪರಸ್ಥಿತಿ, ಕೀಟರೋಗಗಳ ಹಾವಳಿ ಇತ್ಯಾದಿಗಳ ಕುರಿತು ವರದಿ ಮಂಡಿಸಿದರು.

ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಅತೀ ಕಡಿಮೆ ಆಳದಿಂದ-ಕಡಿಮೆ ಆಳದ ಜಮೀನುಗಳಲ್ಲಿ ಅಲ್ಪಾವಧಿ ತಳಿಯಾದ ಖಿS-೩ಖನ್ನು ಸಾಲಿನಿಂದ ಸಾಲಿಗೆ 60 ಸೆಂ.ಮೀ. ನಿಂದ 50 ಸೆಂ.ಮೀ. ವರೆಗೆ ಬಿತ್ತನೆ ಮಾಡಬೇಕು. ಕಡಿಮೆ ಆಳದಿಂದ-ಮಧ್ಯಮ ಆಳದ ಜಮೀನುಗಳಲ್ಲಿ ಖಿS-೩ಖ ತಳಿಯನ್ನು ಸಾಲಿನಿಂದ ಸಾಲಿಗೆ 90 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಮಧ್ಯಮ ಆಳದಿಂದ-ಹೆಚ್ಚಿನ ಆಳದ ಜಮೀನುಗಳಲ್ಲಿ ಮಧ್ಯಮಾವಧಿ ತಳಿಗಳಾದ ಉಖಉ-152 ಹಾಗೂ 811 ತಳಿಗಳನ್ನು ಸಾಲಿನಿಂದ ಸಾಲಿಗೆ 120 ಸೆಂ.ಮೀ. ರಿಂದ 150 ಸೆಂ.ಮೀ. ವರೆಗೆ ಬಿತ್ತಬೇಕು. ಉಖಉ-811 ತಳಿಯನ್ನು ಜಮೀನಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹಾಗೂ ಬೆಳೆ ಸಂದೀಗ್ದ ಹಂತಗಳಲ್ಲಿ ನೀರು ಕೊಡುವ ಅವಕಾಶ ಇದ್ದಲ್ಲಿ ಮಾತ್ರ ಬಿತ್ತಬೇಕು ಎಂದು ಸಲಹೆ ನೀಡಿದರು. ಇದಲ್ಲದೆ ತೊಗರಿ ಬೀಜಗಳನ್ನು ಶೇ.2 ರಷ್ಟು ಕಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ (2೦ ಗ್ರಾಂ. ಸುಣ್ಣ ಒಂದು ಲೀಟರ್ ನೀರಿನಲ್ಲಿ) ಒಂದು ಗಂಟೆ ನೆನೆಸಿ 4 ಗಂಟೆ ನೆರಳಲ್ಲಿ ಒಣಗಿಸಬೇಕು. ಈ ರೀತಿ ಕಠಿಣಗೊಳಿಸಿದ ಬೀಜಗಳನ್ನು ರೈಜೋಬಿಯಂ, ರಂಜಕ, ಕರಗಿಸುವ ಗೊಬ್ಬರದಿಂದ ಉಪಚರಿಸಬೇಕು. ನೆಟೆ / ಸಿಡಿ ಹಾಯುವ ಜಮೀನುಗಳಲ್ಲಿ ಟ್ರೈಕೊಡರ್ಮಾ ಜೈವಿಕ ಗೊಬ್ಬರದಿಂದ ಪ್ರತಿ ಕೇಜಿ ಬೀಜಕ್ಕೆ 4 ಗ್ರಾಂ ನಂತೆ ಬೀಜೋಪಚಾರ ಮಾಡಬೇಕು ಎಂದು ಹೇಳಿದರು. ಬಿತ್ತುವಾಗ ಟ್ರಾö್ಯಕ್ಟರ ಚಾಲಿತ ಬಿ.ಬಿ.ಎಫ್ ಪ್ಲಾಂಟರ್ (ಅಗಲವಾದ ಸಾಲು ಹಾಗೂ ಹರಿ) ಪದ್ಧತಿಯಿಂದ ಬಿತ್ತಿದ್ದಲ್ಲಿ ಸಾಲಿನಿಂದ ಸಾಲಿಗೆ 120 ಸೇಂ.ಮೀ ಹಾಗೂ 2 ಸಾಲುಗಳ ಬದಿಯಲ್ಲಿ ಹರಿಗಳ ನಿರ್ಮಾಣವಾಗಿ ತೇವಾಂಶ ಕಾಪಾಡಿಕೊಳ್ಳಲು ಅನುಕೂಲವಾಗುವುದು. ಹೆಚ್ಚಿನ ಮಳೆ ಆದಲ್ಲಿ ನೀರು ಹರಿಗಳ ಮುಖಾಂತರ ಹರಿದು ತೇವಾಂಶ ಕಾಪಾಡಲು ಹಾಗೂ ನೇಟೆ ರೋಗ ತಡೆಗಟ್ಟಲು ಸಹಾಯವಾಗುತ್ತದೆಂದು ಸಲಹೆ ನೀಡಿದರು. ಈ ಸಮಯದಲ್ಲಿ ಮಧ್ಯಮದಿಂದ ಆಳದ ಕಪ್ಪು ಭೂಮಿಯಲ್ಲಿ ನವಣೆ ಹಾಗೂ ಸಜ್ಜೆಯನ್ನು ಅಂತರ ಬೆಳೆಯಾಗಿ ಬೆಳೆಯಬೇಕು ಎಂದು ತಿಳಿಸಿದರಲ್ಲದೆ ಪೋಷಕಾಂಶಗಳ ನಿರ್ವಹಣೆಗಾಗಿ ಪ್ರತಿ ಎಕರೆಗೆ 10 ಕಿ.ಗ್ರಾಂ. ಸಾರಜನಕ ಹಾಗೂ 20 ಕಿ.ಗ್ರಾಂ ರಂಜಕದ ಜೊತೆಗೆ ಗಂಧಕ (8 ಕಿ.ಗ್ರಾಂ) ಹಾಗೂ ಸತುವಿನ ಸಲ್ಪೇಟ್ (6 ಕಿ.ಗ್ರಾಂ), ಹರಳು ರೂಪಿನ ಬೋರಾನ್ (1.೦೦ ಕಿ.ಗ್ರಾಂ.) ಭೂಮಿಗೆ ಸೇರಿಸುವದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಮಣ್ಣು ಪರೀಕ್ಷೆ ಆಧಾರದ ಮೇರೆಗೆ ಪ್ರತಿ ಮೂರು ವರ್ಷಕೊಮ್ಮೆ ಈ ಮೇಲ್ಕಂಡ ಲಘು ಪೋಷಕಾಂಶಗಳನ್ನು ಭೂಮಿಗೆ ಸೇರಿಸಬೇಕು ಎಂದು ಅವಳಿ ಜಿಲ್ಲೆಯ ರೈತರಿಗಾಗಿ ಮಾರ್ಗದರ್ಶನ ಮಾಡಿದರು.

ಡಾ. ಪ್ರಕಾಶ ಚವ್ಹಾಣ, ಡಾ. ಚಂದ್ರಕಾಂತ ಪವಾರ, ಡಾ. ಬಾಲರಾಜ ಬಿರಾದಾರ, ಡಾ. ಎಸ್. ಎಸ್. ಕರಭಂಟನಾಳ ಡಾ.ಎಚ್.ವೈ. ಸಿಂಗೆಗೋಳ, ಡಾ.ಎಸ್.ಡಿ. ಭಾವಿಕಟ್ಟಿ, ಡಾ.ಎಂ.ಎಚ್. ಯರಝರಿ, ಡಾ. ಮಹಾದೇವಪ್ಪ ಏವೂರ, ಲಿಂಗರಾಜ ತಾಳಿಕೋಟಿ ಸೇರಿದಂತೆ ಜಿಲ್ಲೆಯ ಕೃಷಿ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories