ವಿಜಯಪುರ: ತನ್ವೀರ್ ಸೇಠ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಅದಕ್ಕೆ ಗೃಹ ಸಚಿವರು ಸಂಬAಧಿಸಿದ ಅಧಿಕಾರಿಗಳಿಗೆ ಗಲಭೆ ಪ್ರಕರಣಗಳಿಗೆ ಸಂಬAಧಿಸಿದAತೆ ಮರುಪರಿಶೀಲನೆ ಮಾಡಲು ಪತ್ರಬರೆದಿದ್ದಾರೆ ಅದರಲ್ಲೇನು ತಪ್ಪಿದೆ. ಯಾವುದೇ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ಎನ್ನುವ ಉದ್ದೇಶದಿಂದ ಪತ್ರ ಬರೆಯಲಾಗಿದೆ ಎಂದು ಗೃಹ ಸಚಿವರ ಸೂಚನೆಗೆ ಸಚಿವ ಎಂ ಬಿ ಪಾಟೀಲ ಸಮರ್ಥಿಸಿದರು.
ಕೆಜೆಹಳ್ಳಿ-ಡಿಜೆಹಳ್ಳಿ ಸೇರಿದಂತೆ ರಾಜ್ಯದಲ್ಲಿ ನಡೆದ ಗಲಭೆಗಳ ಪ್ರಕರಣಕ್ಕೆ ಸಂಬAಧಿಸಿದAತೆ ಗೃಹ ಸಚಿವರು ಅಧಿಕಾರಿಗಳಿಗೆ ಮರುಪರಿಶೀಲನೆ ನಡೆಸಲು ಬರೆದಿರುವ ಪತ್ರಕ್ಕೆ ಸಂಬAಧಿಸಿದAತೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ನಿರಪರಾಧಿಗೆ ಶಿಕ್ಷೆ ಆಗಬಾರದು, ನಮ್ಮ ಸಂವಿಧಾನವು ಅದನ್ನೆ ಸಾರುತ್ತದೆ. ಆ ಕಾರಣಕ್ಕೆ ಗೃಹ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಆಗಲಿ ನಿರಪರಾಧಿಗಳಿಗೆ ಆಗಬಾರದು.
ಎಲ್ಲಾ ಪ್ರಕರಣಗಳ ಸೂಕ್ತ ತನಿಖೆಯಾಗಲಿ ತನಿಖೆಯಾದ ಮೇಲೆ ಅಪರಾಧಿಗಳು ಯಾರು ಎಂಬುದು ಗೊತ್ತಾಗಲಿದೆ. ಅಪರಾಧಿಗಳು ಯಾರೆ ಇದ್ದರು ಅವರಿಗೆ ಶಿಕ್ಷೆ ಆಗಲೇಬೇಕು ನಿರಪರಾಧಿಗಳ ಮೇಲೆ ಅನ್ಯಾಯ ಆಗಬಾರದು ಎಂದರು.
ಪಿಎಫ್‌ಐ ಮೇಲೆ ಇದ್ದ ಕೇಸ್‌ಗಳನ್ನು ಈ ಹಿಂದೆ ಕಾಂಗ್ರೆಸ್ ಸರ್ಕಾರ ವಾಪಸ್ ತೆಗೆದುಕೊಂಡಿತ್ತು ಅದೇರೀತಿ ಈ ಪ್ರಕರಣದಲ್ಲಿಯೂ ಕಾಂಗ್ರೆಸ್ ಸರ್ಕಾರ ಕೇಸ್ ವಾಪಸ್ಸು ತೆಗೆದುಕೊಳ್ಳುತ್ತದೆ ಎಂದು ಶಾಸಕ ಯತ್ನಾಳ ಟ್ವಿಟ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ ಅವರು ಹೇಳಿದಂತೆ ನಮ್ಮ ಸರ್ಕಾರ ನಡೆಯುವುದಿಲ್ಲಾ. ಅವರು ಹೇಳಿದಂತೆ ನಾವು ನಡೆದುಕೊಳ್ಳಬೇಕೆಂದು ಏನಿಲ್ಲ. ಯಾರು ಅಪರಾಧಿಗಳಿರುತ್ತರೆ ಅವರಿಗೆ ಶಿಕ್ಷೆ ಆಗುತ್ತದೆ ಯಾರು ನಿರಪರಾಧಿಗಳಿರುತ್ತಾರೆ ಅವರಿಗೆ ಶಿಕ್ಷೆ ಆಗುವುದಿಲ್ಲ ಎಂದರು.
ಪೊಲೀಸರ ನೈತಿಕತೆ ಬಗ್ಗೆ ಮಾತನಾಡುತ್ತಿರುವ ಕೆಲವು ನಾಯಕರು ಈ ಹಿಂದೆ ಇದ್ದ ಗೃಹ ಸಚಿವರು ಪೊಲೀಸರ ಬಗ್ಗೆ ಏನು ಹೇಳಿದ್ದರು ಎನ್ನುವುದನ್ನು ತಿಳಿದುಕೊಳ್ಳಲಿ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅವರ ಗೃಹ ಸಚಿವರು ಪೊಲೀಸರಿಗೆ ನಾಯಿಗಳಿದ್ದಂತೆ ಎಂದು ಹೇಳಿದ್ದರು. ಯಾರೊ ಒಬ್ಬ ತಪ್ಪು ಮಾಡಿದರೆ ಇಡೀ ಇಲಾಖೆನೆ ತಪ್ಪು ಮಾಡಿದಂತೆನಾ. ನಾವು 8 ಗಂಟೆ ಕೆಲಸ ಮಾಡಿದರೆ ಪೊಲೀಸರು 12 ಗಂಟೆ ಕೆಲಸ ಮಾಡುತ್ತಾರೆ. ನವು ಹಬ್ಬ ಮಾಡಿದರೆ ಅವರು ಬಂದೋಬಸ್ತ ಮಾಡುತ್ತಿರುತ್ತಾರೆ. ಅದಕ್ಕಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಪೊಲೀಸರ ಬಗ್ಗೆ ನಮಗೆ ಅಪಾರ ಗೌರವ ಇದೆ. ಎಲ್ಲಾಕಡೆಯೂ ಒಳ್ಳೆಯವರು ಇದ್ದಾರೆ ಕೆಟ್ಟವರು ಇದ್ದಾರೆ. ಪೊಲೀಸರ ನೈತಿಕತೆ ಬಗ್ಗೆ ಮಾತನಾಡುವ ಬಿಜೆಪಿಯವರು ಅವರಿಗೆ ನಾಯಿಗೆ ಹೋಲಿಸಿದ್ದರು ಅದನ್ನು ಅವರು ತಿಳಿದುಕೊಳ್ಳಲಿ. ನಮಗೆ ನಾಯಿಯ ಬಗ್ಗೆಯೂ ಗೌರವ ಇದೆ ಏಕೆಂದರೆ ಅವು ನಿಯತ್ತಾಗಿ ಇರುತ್ತವೆ ಎಂದರು.
ಇನ್ನು ಮುಸ್ಲಿಂ ಗೂಂಡಾಗಳು ಕೆಜೆಹಳ್ಳಿ ಡಿಜೆಹಳ್ಳಿ ಘಟನೆಯಲ್ಲಿದ್ದಾರೆ ಎನ್ನುವ ಈಶ್ವರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿ ಈಶ್ವರಪ್ಪನವರು ಬಹಳ ದೊಡ್ಡವರು ಅವರ ಮಾತಿಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡವನು ನಾನಲ್ಲ ಅವರ ಹೇಳಿಕೆಗೆ ನೆಗಲೆಕ್ಟ್ ಮಾಡಿ ಎಂದು ಈಶ್ವರಪ್ಪನವರಿಗೆ ಸೈಲೆಂಟ್ ಆಗೆ ತಿರುಗೇಟು ನೀಡಿದರು
ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ ಬಿ ಪಾಟೀಲ, ಅವರ ಹೇಳಿಕೆ ಬಗ್ಗೆ ಪಕ್ಷ ಚರ್ಚೆ ಮಾಡುತ್ತದೆ. ಪಕ್ಷದ ವರಿಷ್ಠರು ಎಲ್ಲರ ಹೇಳಿಕೆ ಗಮನಿಸುತ್ತಿದ್ದಾರೆ. ಯಾರು ಯಾವ ಸಂದರ್ಭದಲ್ಲಿ ಏನು ಹೇಳಿಕೆ ನೀಡಿದ್ದಾರೆ. ಯಾಕೆ ಹೇಳಿದ್ದಾರೆ ಎಲ್ಲವನ್ನು ಹೈಕಮಾಂಡ ಗಮನಿಸಿ ಕ್ರಮಕೈಗೊಳ್ಳುತ್ತದೆ ಎಂದರು.