Vijayapura

ಎನ್.ಇ.ಪಿ ಜಾರಿಗಾಗಿ ಕೋಟಿ ಸಹಿ ಸಂಗ್ರಹ ಅಭಿಯಾನ

ವಿಜಯಪುರ : ರಾಜ್ಯದಲ್ಲಿ ಎನ್.ಇ.ಪಿ ಜಾರಿಗೊಳಿಸಬೇಕು ಎಂದು ಸಂದೇಶ ಸಾರಲು ಕೋಟಿ ಸಹಿ ಸಂಗ್ರಹ ಅಭಿಯಾನಕ್ಕೆ ಎಬಿವಿಪಿ ಅಣಿಯಾಗಿದ್ದು, ಅದರ ಅಂಗವಾಗಿ ಎಬಿವಿಪಿ ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿಯೂ ದರಬಾರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಸಹಿ ಸಂಗ್ರಹಣಾ ಅಭಿಯಾನ ಸಂಘಟಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಕ್ಕಮಹಾದೇವಿ ಮಹಿಳಾ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ.ಎಚ್. ವೆಂಕಟೇಶ, ನಮ್ಮ ದೇಶ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಶಿಕ್ಷಣವೇ ಮೂಲ ಕಾರಣವಾಗಿದ್ದು, ಶಿಕ್ಷಣದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ನಾವು ನಮ್ಮ ಮಕ್ಕಳಿಗೆ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವ ಅವಶ್ಯಕತೆ ಇದೆ. ಆ ದೃಷ್ಟಿಯಿಂದ ಎನ್.ಇ.ಪಿ. ದೇಶದ ಶಿಕ್ಷಣ ತಜ್ಞರು ರಚಿಸಿರುವ ನೀತಿ ಇದಾಗಿದ್ದು, ಈ ನೀತಿಯನ್ನ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗಿದೆ ಎಂದರು.

ಎ.ಬಿ.ವಿ.ಪಿ.ಯ ಪ್ರಾಂತ ಕಾರ್ಯಸಮಿತಿ ಸದಸ್ಯ ಸಚೀನ ಕುಳಗೇರಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಕೇವಲ ರಾಜಕಾರಣಕೋಸ್ಕರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಬಾರದು. ಕೇವಲ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಒಂದೇ ಕಾರಣಕ್ಕೆ ನಾವು ಎನ್.ಇ.ಪಿ.ಯನ್ನ ರಾಜ್ಯದಲ್ಲಿ ಜಾರಿಗೆ ತರುತ್ತೇವೆಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸರಕಾರದ ಸಚಿವರು ಹೇಳಿಕೆಗಳನ್ನು ನೀಡುತ್ತಾ ಹೊರಟಿರುವದು ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಎಂದು ದೂರಿದರು.

ನಗರ ಕಾರ್ಯದರ್ಶಿ ಕವಿತಾ ಬಿರಾದಾರ ಮಾತನಾಡಿದರು. ಎ.ಬಿ.ವಿ.ಪಿಯ. ವಿಭಾಗೀಯ ಕಾರ್ಯದರ್ಶಿ ಗಂಗಾಧರ ಹಂಜಗಿ, ಪ್ರಾಚಾರ್ಯ ಜಿ.ಎಚ್. ಮಣೂರ, ಟಿ.ಆರ್. ಕುಲಕರ್ಣಿ, ಮಂಜುನಾಥ ಮೀಸೆ, ಸಿದ್ದು ಪತ್ತಾರ, ಎಮ್.ಎಸ್. ಬಿರಾದಾರ, ಸಂಜೀವ ಕುಲಕರ್ಣಿ, ಸಂದೀಪ ಅರಳಿ, ಶ್ರವಣಕುಮಾರ, ಪೂಜಾ ವೀರಶೆಟ್ಟಿ, ಸುಜ್ಞಾತಾ, ಐಶ್ವರ್ಯ, ಲಕ್ಷ್ಮೀಕಾಂತ ಗೌತಮ, ಕಾರ್ತಿಕ, ಪವಿತ್ರಾ, ಗೌರಿ, ಪ್ರೀಯಾ, ವೈಷ್ಣವಿ ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button