ಪಾಟೀಲ v/s ಪಾಟೀಲ: ಮತ್ತೆ ಆರಂಭವಾದ ಸಮರ

ವಿಜಯಪುರ : ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ನಡುವಣ ಜಟಾಪಟಿ ಅನೇಕ ಬಾರಿ ಸುದ್ದಿಯಾಗುತ್ತಲೇ ಇರುತ್ತದೆ.

ಈ ಹಿಂದೆಯೂ ಸಹ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಹಿನ್ನೆಲೆಯಲ್ಲಿ ಈ ಉಭಯ ನಾಯಕರ ನಡುವೆ ಭಾರೀ ಜಟಾಪಟಿ ನಡೆದಿತ್ತು. ನಂತರ ಇನ್ನೊಂದು ಸಂಧರ್ಭದಲ್ಲಿಯೂ ಈ ಇಬ್ಬರು ನಾಯಕರು ಪರಸ್ಪರ ವಾಕ್ ಸಮರದಲ್ಲಿ ತೊಡಗಿದ್ದ ದೃಶ್ಯಾವಳಿಗಳು ವೈರಲ್ ಆಗಿದ್ದವು.
ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ವಿಜುಗೌಡ ಪಾಟೀಲ ಹಾಗೂ ಸುನೀಲಗೌಡ ಪಾಟೀಲರ ನಡುವೆ ಮತ್ತೆ ಸಮರ ಆರಂಭವಾಗಿದ್ದು, ಈ ವಿಷಯವಾಗಿ ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಪತ್ರಿಕಾಗೋಷ್ಠಿ ನಡೆಸಿ ಹೆಸರು ಉಲ್ಲೇಖಿಸದೇ ಸುನೀಲಗೌಡ ಪಾಟೀಲ ಹಾಗೂ ಸಚಿವ ಡಾ.ಎಂ.ಬಿ. ಪಾಟೀಲ ವಿರುದ್ಧ ಗುಡುಗಿದ್ದಾರೆ.

ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ಜೀವಕ್ಕೆ ಏನಾದರೂ ಅಪಾಯವಾದರೆ ಈ ಇಬ್ಬರು ಸಹೋದರರೆ ಕಾರಣ, ನನಗೆ ಏನಾದರೂ ಆದರೆ ಈ ಇಬ್ಬರೇ ಕಾರಣ ಎಂದು ವಿಜುಗೌಡ ಪಾಟೀಲ ಪ್ರಬಲವಾಗಿ ಆರೋಪಿಸಿದರು.

ಕಳೆದ ದಿ.28 ರಂದು ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ ಎನ್ನಲಾದ ವಾಗ್ವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ವಿಜುಗೌಡ ಪಾಟೀಲ, ನನಗೆ ಏನಾದರೂ ಅಪಘಾತ, ಅಪಾಯವಾದರೆ ಅದಕ್ಕೆ ಇಬ್ಬರು ಸಹೋದರರೇ ನೇರ ಕಾರಣ ಎಂದು ದೂರಿದರು.

ವಿಜಯಪುರ, ಬಬಲೇಶ್ವರದಲ್ಲಿ ಗೂಂಡಾಗಿರಿ ನಡೆದಿದೆ, ಬಬಲೇಶ್ವರದಲ್ಲಿ ಸರ್ವಾಧಿಕಾರಿ ಆಡಳಿತ ನಡೆದಿದೆ. ನಾನು ಸೋತಿಲ್ಲ, ಅಲ್ಲಿನ ಜನ ಕೈ ಹಿಡದಿದ್ದಾರೆ, ಅವರಿಗೆ ಪ್ರಾಣ ಕೊಡಲು ಸಿದ್ದ, ನನ್ನ ಕುಟುಂಬಕ್ಕೆ ಏನಾದರೂ ಆದರೆ ಈ ಸಹೋದರರೇ ಕಾರಣ ಎಂದರು.

ಮದುವೆ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ವಿಪ ಸದಸ್ಯ ಸುನೀಲಗೌಡ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ ನಿಂತಿದ್ದರು, ಈ ವೇಳೆ ಟ್ರಾಫಿಕ್ ಜಾಮ್ ಆದಾಗ ವಾಗ್ವಾದ ನಡೆಯಿತು. ನಮ್ಮ ಬೆಂಬಲಿಗರು ಏನೂ ಮಾಡದೇ ಇದ್ದರೂ ಸಹ ಅವರ ಮೇಲೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ, ಏತನ್ಮಧ್ಯೇ ನಾನೇ ಸುನೀಲಗೌಡರಿಗೆ ಜೀವ ಬೆದರಿಕೆ ಹಾಕಿರುವೆ ಎಂದು ಪ್ರತಿಂಬಿಸುವಂತೆ ಷಡ್ಯಂತ್ರ ರೂಪಿಸಲಾಯಿತು ಎಂದು ದೂರಿದರು.
ಕಳೆದ 2003 ರಿಂದ ಅಪಪ್ರಚಾರ, ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿರುವುದು ನಡೆಯುತ್ತಲೇ ಇದೆ, ನನ್ನ ಮಗನ ಮೇಲೆ, ನನ್ನ ಮೇಲೆ ಚುನಾವಣೆ ಸಂದರ್ಭದಲ್ಲಿಯೂ ಹಲ್ಲೆ ಮಾಡಿದರೂ, ವಿನಾಕಾರಣ ನನ್ನ ಮಗನ ಮೇಲೆ ಸುಳ್ಳು ಕೇಸ್ ಸಹ ದಾಖಲಿಸಿದ್ದೂ ಇದೆ, ನನ್ನ ಮಗನ ಮೇಲೆ ಗಾಡಿ ಹಾಯಿಸಲೂ ಸಹ ಬಂದರೂ, ಈ ಬಗ್ಗೆ ದೂರು ದಾಖಲಿಸಲೂ ಹೋದರೆ ಅಧಿಕಾರಿಗಳು ದೂರು ಸಹ ಸ್ವೀಕರಿಸಲಿಲ್ಲ ಎಂದು ವಿಜುಗೌಡ ಆರೋಪಿಸಿದರು.

Latest Indian news

Popular Stories