Vijayapura

ವಿವಿಧ ಕಳ್ಳತನ ಪ್ರಕರಣ: ಓರ್ವ ಮಹಿಳೆ ಸೇರಿದಂತೆ ಎಂಟು ಜನರ ಬಂಧನ

ವಿಜಯಪುರ: ವಿವಿಧ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದು ಓರ್ವ ಮಹಿಳೆ ಸೇರಿದಂತೆ ಎಂಟು ಜನ ಕಳ್ಳರನ್ನು ಬಂಧಿಸಿ 16,87,000 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್.ಪಿ ಋಷಿಕೇಶ ಸೋನಾವಣೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ವಿಜಯಪುರ ಜಿಲ್ಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಒಟ್ಟು ಎಂಟು ಜನರನ್ನು ಬಂಧಿಸಲಾಗಿದ್ದು, ಬಂಧೀತರಿಂದ 270 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಹಾಗೂ ಜಲ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 1 ಮನೆ ಕಳ್ಳತನ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಜಮೀರ ಖಾನ, ಅನ್ವರ್ ಶೇಖ, ಆಸೀಫ್ ಹವಾಲ್ದಾರ್, ಸಲ್ಮಾನ ಖಾನ ಎಂಬುವವರನ್ನು ಬಂಧಿಲಾಗಿದ್ದು ಅವರಿಂದ ಸುಮಾರು 12,17,000 ರೂ. ಕಿಮ್ಮತ್ತಿನ 21 ತೊಲೆ ಬಂಗಾರದ ಆಭರಣಗಳು, 20 ಗ್ರಾಂ ಬೆಳ್ಳಿ ಕ್ವಾಯಿನ್, ಎಲ್.ಇ.ಡಿ ಟಿವಿ ಹಾಗೂ 2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಇನ್ನು ಗಾಂಧಿ ಚೌಕ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ದಾಖಲಾಗಿದ್ದ ಕಳ್ಳತನ ಪ್ರಕರಣಗಳಲ್ಲಿ ಸಮೀರ್ ಇನಾಂದಾರ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯಿಂದ 2,70,000 ರೂ. ಮೌಲ್ಯದ ಬಂದಾಗರದ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಹಾಗೂ ಸಾಬೀರ್ ಬಗಲಿ, ಗೌಸಮೋದ್ದಿನ ಮಕಾನದಾರ ಎಂಬ ಆರೋಪಿಗಳನ್ನು ಬಂಧಿಸಿ 1,20,000 ರೂ. ಮೌಲ್ಯದ ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಇನ್ನು ಜ್ಯುವೇಲರಿ ಅಂಗಡಿಯಲ್ಲಿ ನಡೆದ ಮೋಸದ ಪ್ರಕರಣವೊಂದನ್ನು ಭೇದಿಸಿರುವ ಪೊಲೀಸರು ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಜ್ಯುವೇಲರಿ ಅಂಗಡಿಯಲ್ಲಿ ನಡೆದ ಮೋಸದ ಪ್ರಕರಣದಲ್ಲಿ ಮಹಾರಾಷ್ಟ್ರದ ಲಲೀತಾ @ ಶಾಂತಾಬಾಯಿ ಗಾಯಕವಾಡ ಎಂಬುವವರನ್ನು ಬಂಧನ ಮಾಡಲಾಗಿದ್ದು, ಬಂಧಿತಳಿಂದ 80,000 ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್.ಪಿ ಮಾಹಿತಿ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button