ರಸ್ತೆ ಅಪಘಾತ: ನವ ದಂಪತಿ ಸಾವು

ವಿಜಯಪುರ: ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ನವ ವಿವಾಹಿತ ದಂಪತಿಗಳು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದಂಪತಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹುನ್ನುಟಗಿ ಗ್ರಾಮದ ಹೊನಮಲ್ಲ ತೆರದಾಳ (31), ಅವರ ಪತ್ನಿ ಗಾಯತ್ರಿ (24) ಮೃತಪಟ್ಟ ದುರ್ದೈವುಗಳು.

ಹೊನಮಲ್ಲ ಅವರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಮೇ 22 ರಂದು ಹೊನಮಲ್ಲ ಹಾಗೂ ಗಾಯತ್ರಿ ವಿವಾಹವಾಗಿತ್ತು. ಮದುವೆಯಾಗಿ 24 ದಿನಗಳಲ್ಲಿ ಸಾವಿಗಿಡಾಗಿದ್ದಾರೆ. ಸಂಬಂಧಿಕರ ಮಕ್ಕಳ ಹುಟ್ಟು ಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ.

ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Indian news

Popular Stories