ವಿಜಯಪುರ: ಬಿಜೆಪಿ, ಜೆಡಿಎಸ್‌ನಿಂದ ಸೇಡಿನ ರಾಜಕಾರಣ : ಗಣಿಹಾರ

ವಿಜಯಪುರ : ಹಿಂದೆ 4 ವರ್ಷದಲ್ಲಿ ಯಾವುದೇ ವರ್ಗಾವಣೆಗಳಾಗಿಲ್ಲವೇ, ಹೊಸ ಸರ್ಕಾರ ಬಂದ ಬಳಿಕ ವರ್ಗಾವಣೆ ಸಹಜ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಗೆತನ, ಸೇಡಿನ ರಾಜಕಾರಣ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಹರಿಹಾಯ್ದರು.

ನಗರದ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಕೊರೆತ, ಕುಂದುಕೊರತೆಗಳು ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ತಕ್ಷಣ ಹೆಚ್ಚಾಗಿವೆ. ಜನರ ವಳಿತಿಗಾಗಿ ಸರ್ಕಾರ ಶ್ರನಿಸುತ್ತದೆ. ಆದರೆ ವಿರೋಧ ಪಕ್ಷಗಳಿಂದ ಹಗೆತನ, ಸೇಡಿನ ರಾಜಕಾರಣ ನಡೆದಿದೆ. ಇದು ವರ್ಗಾವಣೆ ಸಮಯವಾಗಿರುವುದರಿಂದ ವರ್ಗಾವಣ ನಡೆದಿದೆ. ಇದರಲ್ಲಿ ಯಾವುದೇ ವಿಶೇಷ ಇಲ್ಲ ಎಂದರು.

ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದರು ಇಂದು ಅವರೇ ಗ್ಯಾರಂಟಿ ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಸಕಾರದ ಬರವಸೆಗಳು ಹಾಗೂ ಯೋಜನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಸೈಬರ್ ಕ್ರೈಮ್ ಠಾಣೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಡವರಿಗೆ ಅಕ್ಕಿ ಕೊಡದೇ ಕೇಂದ್ರ ಸರ್ಕಾರ ಕಾಂಗ್ರೆಸ್ ಸಕಾರದ ವಿರುದ್ಧ ಸೇಡಿನ ರಾಜಕಾರಣ ನಡೆಸುತ್ತಿದೆ. ರಾಜ್ಯ ಸರ್ಕಾರ ಕೇಳಿದರೂ ಕೊಡದೇ ಬಹಿರಂಗ ಹರಾಜಿಗೆ ಇಟ್ಟಿದ್ದಾರೆ. ಆದರೆ, ಅಲ್ಲೂ ಯಾರೂ ಅಕ್ಕಿ ಖರೀದಿಸಿಲ್ಲ. ಬಡವರಿಗೆ ಕೊಡುವ ಅನ್ನದಲ್ಲೂ ಕೇಂದ್ರ ಬಿಜೆಪಿ ಸರ್ಕಾರ ರಾಜಕಾರಣ ಮಾಡುತ್ತಿರುವುದು ದುರಂತ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಕರ್ನಾಟಕದಿಂದ ಜಿಎಸ್‌ಟಿ ರೂಪದಲ್ಲಿ ಸಾಕಷ್ಟು ತೆರಿಗೆ ಪಾವತಿಯಾಗುತ್ತಿದೆ. ಆದರೆ ಕೇಂದ್ರ ನಮ್ಮ ಪಾಲಿನ ಹಣ ಹಾಗೂ ಸವಲತ್ತುಗಳನ್ನು ನೀಡುವಲ್ಲಿ ಮಲತಾಯಿ ದೋರಣೆ ಎಸಗುತ್ತಿದೆ. ಮೋದಿ ಐದು ಕೆ.ಜಿ. ಅಕ್ಕಿ ಸ್ವತಃ ಕೊಡುತ್ತಿಲ್ಲ, ಜನರ ಹಣದಿಂದ ಕೊಡಲಾಗುತ್ತಿದೆ ಎನ್ನುವುದನ್ನು ಬಿಜೆಪಿಗರು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಬದರುದ್ದಿನ ಸೌದಾಗರ ಕ್ಲರ್ಕ್ ಇದ್ದಾನೆ ಎಂದು ಶಾಸಕ ಯತ್ನಾಳ ಅಧಿವೇಶನದಲ್ಲಿ ಟೀಕಿಸಿದ್ದಾರೆ. ಅದೆಲ್ಲ ಶುದ್ದ ಸುಳ್ಳು ಸೌದಾಗರ ಅರ್ಹತೆ ಇದ್ದ ಕಾರಣಕ್ಕೆ ಆಯುಕ್ತರಾಗಿದ್ದಾರೆ. ಉತ್ತಮ ಕೆಲಸ ಮಾಡು ದಕ್ಷ ಅಧಿಕಾರಿಯಾಗಿದ್ದಾರೆ ಎಂದರು.

ಪಾಲಿಕೆ ಆಯುಕ್ತರ ಅರ್ಹತೆಯ ಬಗ್ಗೆ ಮಾತನಾಡುವ ಯತ್ನಾಳ ಈ ಹಿಂದೆ ಲಾರಿ ಓಡಿಸುತ್ತಿದ್ದರು. ಈಗ ಕೇಂದ್ರ ಮಂತ್ರಿ, ಸಚಿವ ಶಾಸಕ ಆಗಿದ್ದಾರೆ. ಈ ಬಗ್ಗೆ ನಾವು ಟೀಕಿಸಿದ್ದೇವೆಯೇ. ಅರ್ಹರತೆ ಇರುವ ಕಾರಣಕ್ಕೆ ಸೌದಾಗರ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಹರಿಹಾಯ್ದರು.

ಜೈನ ಮುನಿ ಹತ್ಯೆಯಲ್ಲಿ ಎರಡನೇ ಆರೋಪಿ ಮುಸ್ಲಿಂ ಇದ್ದಾನೆ ಎಂಬ ಕಾರಣಕ್ಕೆ ಸಿಬಿಐ ತನಿಖೆಗೆ ವಹಿಸಿ ಎಂದು ಅನಗತ್ಯವಾಗಿ ಆಗ್ರಹಿಸುತ್ತಿದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿ ನಡೆದ ಟೆಕ್ಕಿಗಳ ಹತ್ಯೆ ಮತ್ತಿತರ ಪ್ರಕರಣ ಏಕೆ ಸಿಬಿಐಗೆ ವಹಿಸಲಿಲ್ಲ ಎಂದು ಪ್ರಶ್ನಿಸಿದರು.

ಎಬಿವಿಪಿ ಮುಖಂಡರು ಸರ್ಕಾರಿ ಕಾಲೇಜು ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುವಾಗ ಪೊಲೀಸರ ಮೇಲೆ ದಬ್ಬಾಳಿಕೆ, ಗುಂಡಾ ಸಂಸ್ಕೃತಿ ಪ್ರದರ್ಶಿಸಿದ್ದಾರೆ. ವಿದ್ಯಾರ್ಥಿಗಳನ್ನು ಬೀದಿಗೆ ತಂದು ಪ್ರತಿಭಟನೆ ಮಾಡುತ್ತಿದ್ದಾರೆ ಇದು ಖಂಡನೀಯ. ಇಷ್ಟು ವರ್ಷ ಸೌಲಭ್ಯ ಇದ್ದವೇ, ಕೇವಲ ಎರಡು ತಿಂಗಳಲ್ಲಿ ಸೌಲಭ್ಯ ವಂಚಿತವಾಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ದಲಿತರ ಮೇಲೆ ಅತ್ಯಾಚಾರ, ಅನಾಚಾರ ಮೇಲ್ವರ್ಗಗಳಿಂದ ಆದರೂ ಖಂಡಿಸುತ್ತಿಲ್ಲ. ಜೈನರೂ ಹಿಂದುಗಳೆಂದು ಹೇಳುತ್ತಿರುವುದು ಖಂಡನೀಯ. ಮುಸ್ಲಿಂರ ಬಜೆಟ್ ಎಂದು ಯತ್ನಾಳ ಹೇಳಿರುವುದು ಯಾವ ಆದಾರದಲ್ಲಿ ಎನ್ನುವುದು ಗೊತ್ತಾಗುತ್ತಿಲ್ಲ. ಇದು ರಾಜ್ಯದ ಬಜೆಟ್ ಯತ್ನಾಳರ ಹೇಳಿಕೆ ಖಂಡನೀಯ ಎಂದರು.

ದೇಶದಲ್ಲಿ ಮುಸ್ಲಿಂ ಸಮುದಾಯ ತೆರಿಗೆ ಕಟ್ಟುತ್ತಿದೆ. ಮೂರು ಲಕ್ಷ ಕೋಟಿಯಲ್ಲಿ ಕೇವಲ ಎರಡು ಸಾವಿರ ಕೋಟಿ ಮಾತ್ರ ಅಲ್ಪಸಂಖ್ಯಾತರಿಗೆ ನೀಡಿದ್ದಾರೆ. ಹೀಗಿರುವಾಗ ಉತ್ತಮ ಬಜೆಟ್ ಅನ್ನು ಅಕ್ಬರ್, ಅಂಥೋಣಿ ಬಜೆಟ್ ಎಂದು ಟೀಕಿಸಿದ್ದಾರೆ. ಬಿಜೆಪಿಗರಿಗೆ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಆದರೆ, ಪ್ರಧಾನಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕುತ್ತಿದ್ದಾರೆ ಎಂದು ಚೇಡಿಸಿದರು.

ಗೋಹತ್ಯೆ ಬಗ್ಗೆ ಮಾತನಾಡುವ ಸ್ವಾಮೀಜಿಗಳು ಯಾರಾದರೂ ಗೋವು ಸಾಕಿದ್ದಾರಾ ? ಹೆಂಡಿ, ಉಚ್ಚಿ ತೆಗೆದಿದ್ದಾರಾ ? ತೋರಿಕೆಗೆ ಬಿಜೆಪಿ ವಕ್ತಾರರಂತೆ ಹೋರಾಟ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಜಾತ್ಯಾತೀತ ಎನ್ನುವ ಪದಕ್ಕೆ ಅರ್ಥ ಗೊತ್ತಿಲ್ಲ ಎನಿಸುತ್ತಿದೆ. ಜೆಡಿಎಸ್ ಜಾತ್ಯತೀತ ಎಂಬ ಹೆಸರಿಗೆ ಕಳಂಕ ತರಲು ಹೊಟಿದೆ ಎಂದು ಸಮಾದಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಾಗರಾಜ ಲಂಬು, ಅಕ್ರಂ ಮಾಶಾಳಕರ ಉಪಸ್ಥಿತರಿದ್ದರು.

Latest Indian news

Popular Stories