ಅಶ್ಲೀಲ ವಿಡಿಯೋ ಅಪಲೋಡ್: 13 ಜನರ ಬಂಧನ

ವಿಜಯಪುರ : ಅಶ್ಲೀಲ ವಿಡಿಯೋ ಅಪಲೋಡ್ ಮಾಡಿದರೆ ಹುಷಾರ್, ಈಗಾಗಲೇ ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 13 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಯಾರೂ ಸಹ ಈ ರೀತಿಯ ಕೃತ್ಯ ಎಸಗಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ ಖಡಕ್ ಎಚ್ಚರಿಕೆ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ಲೀಲ ವಿಡಿಯೋ ಅಪಲೋಡ್ ಮಾಡುವುದು, ಫಾರ್ವರ್ಡ್ ಮಾಡುವುದು ಸಹ ಅಪರಾಧ, ಹೀಗಾಗಿ ಈ ರೀತಿಯ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ, ಸಾಮಾಜಿಕ ಜಾಲತಾಣಗಳ ಮೂಲಕ ಶೋಷಣೆ ಮಾಡುವ ಒಟ್ಟು 13 ಪ್ರಕರಣಗಳಿಗೆ ಸಂಬಂದಿಸಿದಂತೆ 13 ಜನರನ್ನು ಬಂಧಿಸಲಾಗಿದ್ದು, ಬಂಧಿತರಿಂದ 13 ಮೊಬೈಲ್ ಜಪ್ತಿ ಮಾಡಿಕೊಳ್ಳಲಗಿದೆ, ಈ ಎಲ್ಲರ ಸಾಮಾಜಿಕ ಜಾಲತಾಣ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ವಿವರಿಸಿದರು.


ಇತ್ತೀಚಿನ ದಿನಗಳಲ್ಲಿ ಯುವಜನತೆ ಔಷಧಿ ಹೆಸರಿನಲ್ಲಿ ಮಾದಕ ದ್ರವ್ಯಗಳನ್ನು ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ, ಇದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಕಡ್ಡಾಯವಾಗಿ ನಿಯಮಾವಳಿ ಅಧರಿಸಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದವರಿಗೆ ಔಷಧಿ ವಿತರಿಸಲು ಡ್ರಗ್ ಮಾರಾಟ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಒಂದು ರೀತಿ ಗೀಳಾಗಿ ಔಷಧಿ ಸೇವನೆ ಮಾಡುವವರು ಔಷಧ ಖರೀದಿಗೆ ಬಂದರೆ ಅಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.

ನಕಲಿ ಜ್ಯೋತಿಷಿ ಬಂಧನ:
ತಿಕೋಟಾ ಪಟ್ಟಣದ ಮಹಿಳೆಯೊಬ್ಬರಿಗೆ ಆನಲೈನ್ ಮೂಲಕ ಜ್ಯೋತಿಷ್ಯ ಹೇಳಿ ಸಮಸ್ಯೆ ಪರಿಹಾರ ಕಲ್ಪಿಸುವುದಾಗಿ ಹೇಳಿ ಲಕ್ಷಾಂತರ ರೂ.ಗಳನ್ನು ವಂಚಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಗಳನ್ನು ಬೆಂಗಳೂರಿನ ಸುಂಕದಕಟ್ಟೆ ನಿವಾಸಿಗಳಾದ ಅಭಿಷೇಕ ಮಂಜುನಾಥ, ಮಹಾಂತೇಶ ನಾಮದೇವ ಶಾಸ್ತ್ರಿ ಜಾಧವ, ಆಕಾಶ ಮಾತಾರಪ್ಪ ಶಿಂಧೆ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ವಂಚನೆ ಮಾಡಿದ 1,67,556 ರೂ.ಗಳನ್ನು, 3 ಮೊಬೈಲ್ ಜಪ್ತು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ, ಇತ್ತೀಚಿನ ದಿನಗಳಲ್ಲಿ ಆನಲೈನ್ ವಂಚನೆಯ ವೇದಿಕೆಯಾಗಿ ಮಾಡಿಕೊಂಡಿದ್ದು, ತಿಕೋಟಾದಲ್ಲಿಯೂ ಈ ರೀತಿಯ ಘಟನೆ ನಡೆದಿದೆ.


ತಿಕೋಟಾದ ಮಹಿಳೆಯೊಬ್ಬರು ಆನಲೈನ್ ಮೂಲಕ ಜ್ಯೋತಿಷಿಯೊಬ್ಬರನ್ನು ಸಂಪರ್ಕ ಮಾಡಿದ್ದರು, ಕೌಟುಂಬಿಕ ಸಮಸ್ಯೆಗಳನ್ನು ಪರಿಹಾರ ಮಾಡುವುದಾಗಿ ಹೇಳಿ ಪೂಜೆ-ಪುನಸ್ಕಾರದ ಹೆಸರಿನಲ್ಲಿ ಒಟ್ಟು 1,67,556 ರೂ. ಖಾತೆಗೆ ಹಣ ಹಾಕಿಸಿಕೊಂಡಿದ್ದರು.

Latest Indian news

Popular Stories