Vijayapura: ಸತತ ಅಧ್ಯಯನದ ಮೂಲಕ ಉತ್ತಮ ಸಾಧನೆ ಮಾಡಿ: ನಾಗಡಹಳ್ಳಿ

ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನದ ಮೂಲಕ ಉತ್ತಮ ಸಾಧನೆ ಮಾಡಿ ಪೋಷಕ ಕನಸುಗಳನ್ನು ನನಸು ಮಾಡಲು ಶ್ರಮಿಸಬೇಕು ಎಂದು ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಶೂಶ್ರುಷ ಮಹಾವಿದ್ಯಾಲಯದಲ್ಲಿ ನಡೆದ ಮೊದಲನೇ ವರ್ಷದ ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಮತ್ತು ಜಿ.ಎನ್.ಎಂ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಬೋಧಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಭಾಗದ ಜನರಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿರುವ ಪ್ರತಿಷ್ಠಿತ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಕಾಲೇಜಿಗೆ ಸೇರುವ ಮೂಲಕ ವಿದ್ಯಾರ್ಥಿಗಳು ಉತ್ತಮ ನಿರ್ಧಾರ ಕೈಗೊಂಡಿದ್ದೀರಿ. ಇಲ್ಲಿ ನೀಡಲಾಗುವ ಗುಣಮಟ್ಟದ ಶಿಕ್ಷಣವನ್ನು ಪಡೆದು ಎಲ್ಲರೂ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಬೋರ್ಡ ಆಫ್ ಸ್ಟಡೀಸ್ ಸದಸ್ಯ ಶ್ರೀಕಾಂತ ಪುಲಾರಿ ಮಾತನಾಡಿ, ಶುಶ್ರೂಷ ವೃತ್ತಿಗೆ ವಿಶ್ವದಲ್ಲಿ ಹೆಚ್ಚಿನ ಬೇಡಿಕೆ ಇದೆ. ನರ್ಸಿಂಗ್ ಪದವೀಧರರು ಯಾರೂ ನಿರುದ್ಯೋಗಿಗಳಾಗಿರುವ ಉದಾಹರಣೆಗಳಿಲ್ಲ. ಅಲ್ಲದೇ, ವೃತ್ತಿಕೌಶಲ್ಯ ಹೆಚ್ಚಿಸಿಕೊಂಡರೆ ಉತ್ತಮ ಹುದ್ದೆಗಳೂ ಸಿಗುತ್ತವೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೋನ್ ಚೋಪಡೆ ಮಾತನಾಡಿ, ನಮ್ಮ ಕಾಲೇಜಿನಲ್ಲಿ ನುರಿತ ಅಧ್ಯಾಪಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಇಲ್ಲಿರುವ ಸಕಲ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಡಾ. ಸುಚಿತ್ರ ರಾಟಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮ ದಿನದ ಮಹತ್ವವನ್ನು ಸೌಜನ್ಯ ಪೂಜಾರ ವಿವರಿಸಿದರು.

ಈ ಸಂದರ್ಭದಲ್ಲಿ ಪ್ರವೀಣ ಬಗಲಿ, ಕಾಲೇಜಿನ ಬೋಧಕ ಸಿಬ್ಬಂದಿಯಾದ ಡಾ. ಬಶೀರ ಅಹಮದ್ ಸಿಕಂದರ್, ಅಮರ ಷಣ್ಮುಗೆ, ನಜೀರ ಬಳಗಾರ, ಸತೀಶ ನಡಗಡ್ಡಿ, ಶ್ವೇತಾ ಹಿಟ್ನಾಳ, ಸಾವಿತ್ರಿ, ಡಾ. ಅಮಿತಕುಮಾರ ಬಿರಾದಾರ, ಲಕ್ಷ್ಮಿ ಅಗ್ನಿಹೋತ್ರಿ, ಬಾಬು ಕೊದ್ನಾಪುರ, ಡಾ. ಸಂಕಪ್ಪ ಗುಲಗಂಜಿ, ಸಿಬ್ಬಂದಿಯಾದ ಭಾಗ್ಯಶ್ರೀ, ಅನಿತಾ, ಸುಮಾ, ಸುಧೀರ ಬಾಳಿ, ಪರಶುರಾಮ, ಪ್ರಾನ್ಸಿಸ್, ಕಿರಣ ಶಿರೋಳಕರ, ಸೋಮೇಶ ಬುರುಕುಲೆ, ಯಲ್ಲಮ್ಮ, ರೇಷ್ಮಾ ಚವ್ವಾಣ, ಐಶ್ವರ್ಯ, ರಾಜಶ್ರೀ, ಪೃಥ್ವಿ, ಅನಿಲ, ಆಶಾ, ವಿದ್ಯಾರ್ಥಿಗಳು, ಪೋಷಕರು ಮುಂತಾವದವರು ಉಪಸ್ಥಿತರಿದ್ದರು.

Latest Indian news

Popular Stories