ವಿಜಯಪುರ: ಉಕುಮನಾಳನಲ್ಲಿ ಮತ್ತೆ ಭೂಕಂಪನ

ವಿಜಯಪುರ: ವಿಜಯಪುರ ತಾಲೂಕಿನ ಉಕ್ಕುಮನಾಳ ಗ್ರಾಮದಲ್ಲಿ ಶುಕ್ರವಾರ ಭೂಕಂಪನ ಆಗಿದೆ. ಭೂಕಂಪನದ ಶಬ್ದದಿಂದ ಜನತೆ ಮನೆಯಿಂದ ಹೊರಬಂದು ಅಲ್ಲಿಯೇ ಕಾಲ ಕಳೆಯುವಂತಾಗಿದೆ.

ವಿಜಯಪುರ ಜಿಲ್ಲೆಯ ಉಕ್ಕುಮನಾಳ ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ. ಶುಕ್ರವಾರ ಬೆಳಗ್ಗೆ 6:52 ಕ್ಕೆ ಭೂಕಂಪನ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3 ರಷ್ಟು ಪ್ರಮಾಣದ ಭೂಕಂಪನ ದಾಖಲಾಗಿದೆ ಎಂದು ಕೆ.ಎಸ್.ಎನ್.ಡಿ.ಎಮ್.ಸಿ ಅವರು ಧೃಡಪಡಿಸಿದ್ದಾರೆ.
ಇನ್ನು ಕಳೆದೆರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಹಲವಾರು ಬಾರಿ ಭೂಮಿ ಕಂಪಿಸಿದೆ. ಇದರಿಂದ ಜನತೆ ಭಯಭೀತರಾಗಿದ್ದು ಆತಂಕದಲ್ಲಿಯೆ ಕಾಲಕಳೆಯುವಂತಾಗಿದೆ.

Latest Indian news

Popular Stories