ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿ, ಬರ್ಬರ ಹತ್ಯೆ: ಇಬ್ಬರ ಬಂಧನ

ವಿಜಯಪುರ: ಹೆಂಡತಿಯ ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಗಂಡನ್ನು ಬರ್ಬರವಾಗಿ ಹತ್ಯೆಗೈದಿರುವ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಹೇಳಿದರು.


ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಸವನಬಾಗೇಬಾಡಿಯ ಇಂಗಳೇಶ್ವರ ರಸ್ತೆಯ ಬಳಿ ಜಕರಾಯ್ ದಳವಾಯಿ ಹತ್ಯೆಗೈದು, ಸುಟ್ಟು ಪರಾರಿಯಾಗಿದ್ದರು. ಇನ್ನು ಮೃತಪಟ್ಟಿರುವ ಜಕರಾಯ್‌ನ ಹೆಂಡತಿ ಜಯಶ್ರೀ ದಳವಾಯಿ, ಡೋಂಗ್ರಿಸಾಬ್ ಬೊಮ್ಮನಳ್ಳಿ ಬಂಧಿತ ಆರೋಪಿಗಳು. ಇನ್ನು ಜಕರಾಯನ್ನು ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದು, ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಬಾವಿಯೊಂದರ ಬಳಿ ಅರ್ಧ ಮರ್ಧ ಸುಟ್ಟು ಪರಾರಿಯಾಗಿದ್ದರು. ಅಲ್ಲದೇ, ದೇಹ ಸುಟ್ಟಿರುವ ಜಾಗದ ಪಕ್ಕದಲ್ಲಿರುವ ಬಾವಿಯಲ್ಲಿ ಎಸೆದು ಎಸ್ಕೇಪ್ ಆಗಿದ್ದರು.‌ ಅಲ್ಲದೇ, ಮೃತನ ಎಟಿಎಂ ಕಾರ್ಡ್, ಬೈಕ್ ಲೈಸನ್ಸ್, ಪ್ಯಾನ್‌ಕಾರ್ಡ್, ಹತ್ಯೆಗೆ ಬಳಸಿದ ಕೊಡಲಿ ಬಾವಿಯಲ್ಲಿ ಎಸೆದಿದ್ದರು. ಇದೀಗ್ ಆರೋಪಿಗಳನ್ನು ಬಂಧಿಸಿ, ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು.

Latest Indian news

Popular Stories