vijayapura| ಮತದಾನದ ಮಮತೆಯ ಕರೆಯೋಲೆ….

ವಿಜಯಪುರ : ಮದುವೆಯ ಮಮತೆಯ ಕರೆಯೋಲೆಯನ್ನು ಸಂಬಂಧಿಗಳ, ಸ್ನೇಹಿತರ ಮನೆಗಳಿಗೆ ಹೋಗಿ ನೀಡುವುದು ವಾಡಿಕೆ. ಆದರೆ ಮತದಾನ ಎಂಬ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸುವಂತೆ ಮಮತೆಯ ಕರೆಯೋಲೆ ನೀಡುವುದು ಅಪರೂಪ.

ಮತದಾನದ ಮಮತೆಯ ಕರೆಯೋಲೆ ಎಂಬ ಶೀರ್ಷಿಕೆ ಹೊತ್ತ ಹಾಗೂ ಮದುವೆ ಆಮಂತ್ರಣ ಪತ್ರಿಕೆಯಲ್ಲಿರುವ ವಿವರಗಳಂತೆಯೇ ಮತದಾನದ ಮಹತ್ವ ಸಾರುವ ಆಮಂತ್ರಣವನ್ನು ನಿಡೋಣಿಯಲ್ಲಿ ನೀಡಲಾಯಿತು.

ವಿಜಯಪುರ ಜಿಲ್ಲೆಯಾದ್ಯಂತ ಸಿಇಓ ರಿಷಿ ಆನಂದ ಅವರ ಸಾರಥ್ಯದಲ್ಲಿ ಸ್ವೀಪ್ ಸಮಿತಿ ಮೂಲಕ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೃಹತ್ ಗಾತ್ರದ ಹಿಲಿಯಂ ಬಲೂನ್ ಹಾರಾಟ, ರಂಗವಲ್ಲಿ, ಆಟೋಟ, ಸೆಲ್ಫಿ ಫಾಯಿಂಟ್‌ಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಹಳ್ಳಿ ಹಳ್ಳಿಗಳಲ್ಲಿಯೂ ನಡೆಯುತ್ತಿದೆ. ಇದಕ್ಕೆ ಮತ್ತಷ್ಟು ಮೆರಗು ನೀಡುವಂತೆ ನಿಡೋಣಿಯಲ್ಲಿ ಆಮಂತ್ರಣ ಪತ್ರಿಕೆ ಮಾದರಿಯ ಕರೆಯೋಲೆ ಗಮನ ಸೆಳೆದಿದ್ದು, ಅಧಿಕಾರಿಗಳ ತಂಡ ಮನೆ-ಮನೆಗೆ ಹೋಗಿ ಈ ಕರೆಯೋಲೆ ನೀಡುತ್ತಿದೆ.
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ತಾಲೂಕ ಸ್ವಿಪ್ ಸಮಿತಿ ಹಾಗೂ ಗ್ರಾಮ ಪಂಚಾಯತ ಸಹಯೋಗದಲ್ಲಿ ಮತದಾನ ಜಾಗೃತಿ ಹಮ್ಮಿಕೊಳ್ಳಲಾಗಿತ್ತು. ಸಹಾಯಕ ನಿರ್ದೆಶಕಿ ಭಾರತಿ ಹಿರೆಮಠ ನೇತೃತ್ವದಲ್ಲಿ ಈ ವಿಶಿಷ್ಟ ಕಾರ್ಯಕ್ರಮ ನಡೆಯಿತು.

`ಮತದಾನದ ಮಮತೆಯ ಕರೆಯೋಲೆ, ತಾಲೂಕ ಸ್ವಿಪ್ ಸಮೀತಿ ಬಬಲೇಶ್ವರ ಇವರ ಮತದಾನ ಆಮಂತ್ರಣ ಸ್ವಸ್ತಶ್ರೀ ಶಾಲಿವಾಹನ ಶೆಖೆ 1945ಕ್ಕೆ ಸರಿಯಾದ ಶ್ರೀ ಶೋಭಾಕೃತ ನಾಮ ಸಂವತ್ಸರ ಚೈತ್ರಮಾಸ ಅಮೃತ ಸಿದ್ದಿಯೋಗ ದಿನಾಂಕ 07-05-2024 ನೇ ಮಂಗಳವಾರ ಬೆಳಗ್ಗೆ 7.00 ಘಂಟೆಯಿಂದ ಸಂಜೆ 6.00 ಘಂಟೆಯವರಿಗೆ ಸಲ್ಲುವ ಶುಭಗಳಿಗೆಯಲ್ಲಿ `ಮತದಾನ’ ಈ ಚುನಾವಣೋತ್ಸವ ನೆರೆವೆರುವಂತೆ ಕೇಂದ್ರ ಚುನಾವಣಾ ಆಯೋಗವು ನಿಚ್ಚಿಸಿರುವುದರಿಂದ ಸಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಸ್ವ ಇಚ್ಚೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಕೋರಲಾಗಿದೆ. ತಮ್ಮ ಆಗಮನಾಲಾಷಿಗಳು ತಾಲೂಕ ಸ್ವಿಪ್ ಸಮಿತಿ ಹಾಗೂ ಗ್ರಾಮ ಪಂಚಾಯತ ನಿಡೋಣಿ ಎಂದು, ಸ್ಥಳ ತಮ್ಮ ತಮ್ಮ ಮತಗಟ್ಟೆ ಕೇಂದ್ರ ಎಂದು ಬರೆದಿರುವ ಕರೆಯೋಲೆ ಗಮನ ಕೇಂದ್ರಿಕರಿಸಿದೆ.
ಪಿಡಿಓ ಅಧಿಕಾರಿ ಬುರಾನಲ್ಲಾ ಮುಜಾವರ್, ಕಾರ್ಯದರ್ಶಿ ಕಲ್ಲಪ್ಪ ಗೆಣ್ಣೂರ, ಐಇಸಿ ಸಂಯೊಂಜಕ ಶಾಂತಪ್ಪ ಇಂಡಿ, ಅಬ್ಬಾಸಾಬ್ ಮುಲ್ಲಾ, ರೂಪಾ ಚಿಮ್ಮಡ, ಅಶ್ವೀನಿ ಶಹಾಪೂರ, ಅಬ್ಧುಲ್ ಮುಜಾವರ್ ಮೊದಲಾದವರು ಉಪಸ್ಥಿತರಿದ್ದರು.

Latest Indian news

Popular Stories