
Yadagiri
ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮುಸ್ಲಿಮರು ಅಲ್ಲಲ್ಲಿ ದಂಗೆ ಶುರು ಮಾಡಿಕೊಂಡಿದ್ದಾರೆ – ಸೂಲಿಬೆಲೆ
ಯಾದಗಿರಿ, ಅಕ್ಟೋಬರ್ 09: ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮುಸಲ್ಮಾನರು ಬಾಲ ಬಿಚ್ಚತೊಡಗಿದ್ದಾರೆ.ಇದಕ್ಕೆಲ್ಲ ಸಿದ್ದರಾಮಯ್ಯ ಕಾರಣ ಎಂದು ಸೂಲಿಬೆಲೆ ದೂರಿದ್ದಾರೆ.
ಅನೇಕ ಕಡೆಗಳಲ್ಲಿ ದಂಗೆಯ ರೂಪದ ವ್ಯವಸ್ಥೆ ಮಾಡಲಿಕ್ಕೆ ಹೊರಟಿರುವುದನ್ನು ನೋಡಿದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಇದಕ್ಕಿಂತ ಹೆಚ್ಚು ಭಿನ್ನವಾದ ನಿರೀಕ್ಷೆ ಯಾರಿಗೂ ಇರಲಿಲ್ಲ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಯೇ ಮುಸ್ಲಿಮರು ಚಿಗುರಿ ಕೊಡಿದ್ದು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಈ ಕುರಿತು ಭಾನುವಾರ ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ವತಿಯಿಂದ ಹಮ್ಮಿಕೊಂಡ ಶೌರ್ಯ ಜಾಗರಣಾ ರಥಯಾತ್ರೆಯ ಶೋಭಾಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯದಲ್ಲಿಆಗದವರೆಲ್ಲಒಗ್ಗಟ್ಟಾಗಿ ಡಾಟ್ ಪಾರ್ಟಿ ಅಸ್ತಿತ್ವಕ್ಕೆ ತಂದು ಜಾತಿಯ ಹೆಸರಿನಲ್ಲಿ ದೇಶ ಒಡೆಯುವ ಹುನ್ನಾರ್ ನಡೆಸಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಆತಂಕ ವ್ಯಕ್ತಪಡಿಸಿದರು.




