
ರಾಯಚೂರು: ನರೇಗಾ-ಅಯವ್ಯಯ ತಯಾರಿಕೆ ಪ್ರಕ್ರಿಯೆಗೆ ಚಾಲನೆ
ರಾಯಚೂರು,ಅ.07:- ತಾಲೂಕಿನ ಬಾಯಿದೊಡ್ಡಿ ಗ್ರಾಮ ಪಂಚಾಯತಿಯ ವಡವಟ್ಟಿ, ಕುರುಬದೊಡ್ಡಿ ಮತ್ತು ಕಡಗಂದೊಡ್ಡಿ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2021-22ನೇ ಸಾಲಿನ ಅಯವ್ಯಯ ತಯಾರಿಕೆ ಪ್ರಕ್ರಿಯೆಗೆ ಅ.7ರ ಬುಧವಾರ ಚಾಲನೆ ನೀಡಲಾಯಿತು.
ತಾಲೂಕು ಸಂಯೋಜಕ ಧನರಾಜ್ ಅವರು ಮಾತನಾಡಿ, ರೈತರ ಕ್ರಿಯಾ ಯೋಜನೆ ಅಭಿಯಾನದಡಿ ರೈತರಿಗೆ ತಮಗೆ ಬಯಸುವ ತೆಂಗು, ಮಾವು, ಸಪೆÇೀಟ, ನೀಂಬೆ, ದಾಳಿಂಬೆ, ನುಗ್ಗೆ ಪಪ್ಪಾಯ, ಕರಿಬೇವು, ನೆಲ್ಲಿ ದ್ರಾಕ್ಷಿ, ಸಿತಫಲ್ ಬಾಳೆ ಹಾಗೂ ಗುಲಾಬಿ ಹೂ, ಮಲ್ಲಿಗೆ ಹೂ ಮತ್ತು ಕೃಷಿ ಹೊಂಡ, ಬದು ನಿರ್ಮಾಣ, ದನದ ಶೇಡ್ ಬಚ್ಚಲು ಗುಂಡಿ ಮುಂತಾದ ಕಾಮಗಾರಿಗಳನ್ನು ಮಾಡಿಕೊಳ್ಳಲು ಇದು ಸುವರ್ಣವಕಾಶವು ಸರಕಾರದಿಂದ ಲಭಿಸಿದ್ದು, ಇದನ್ನು ಎಲ್ಲಾರು ಸದುಪಯೋಗ ಪಡೆದುಕೊಂಡು ಗ್ರಾಮೀಣ ಜನರ ಬದುಕನ್ನು ಬದಲಾಯಿಸುವಂತಹ ಖಾತ್ರಿ ಯೋಜನೆಯು ಇದಾಗಿದೆ, ಆನ್ಲೈನ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಸದರಿ ವಾಹನದ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಹಾಕಬಹುದೆಂದು ತಿಳಿಸಿದರು.
ಕಾರ್ಯದರ್ಶಿ ಹನುಮಂತಪ್ಪ ಮತ್ತು ಯಲ್ಲನಗೌಡ ರೈತರಿಗೆ ಕಾಮಗಾರಿ ಪಟ್ಟಿಗೆಯಲ್ಲಿ ಬರೆದು ಹಾಕುವುದನ್ನು ತಿಳಿಸಿಕೊಟ್ಟು ನಮ್ಮ ಪಂಚಾಯತಿಯ ಎಲ್ಲಾ ರೈತರು ತಪ್ಪದೆ ಈ ಸೌಲಭ್ಯವನ್ನು ಪಡೆದುಕೊಳ್ಳುಲು ಮನವಿ ಮಾಡಿದರು.
ಸಂದರ್ಭದಲ್ಲಿ ವಾಹನ ಚಾಲಕ ಗುಡದಯ್ಯ, ವಾಟರ್ ಮೇನ್ ಹಾಜರಿದ್ದರು.




