Crime

ರಾಯಚೂರು: ಬಾಲ ಕಾರ್ಮಿಕರ ತಪಾಸಣೆ; ನಾಲ್ಕು ಮಕ್ಕಳು ರಕ್ಷಣೆ

ರಾಯಚೂರು,ಅ.07:- ಮಾನವಿ ಪಟ್ಟಣದ ಹೋಟೆಲ್, ಗ್ಯಾರೇಜ್ ಮತ್ತು ಇನ್ನಿತರ ವಾಣಿಜ್ಯ ಉದ್ದಿಮೆಗಳಲ್ಲಿ ತಪಾಸಣೆ ಕೈಗೊಂಡಾಗ 2 ಗ್ಯಾರೇಜ್, ಒಂದು ಹಾರ್ಡ್‍ವೇರ್ ಶಾಪ್, ಒಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು.
ಮೇ ಅನ್ವರ್ ಪಾಷ ವೆಲ್ಡಿಂಗ್ ವರ್ಕ್ ಶಾಪ್ ಮಾನವಿ. ಮೇ ಸಂದ್ಯಾ ಎಂಟರ್ ಪ್ರೈಸಸ್ ಮತ್ತು ಗ್ಯಾರೇಜ್ ಮಾನವಿ, ಹುಸೇನ್‍ಬಾಷ ಆಂಡ್ ಸನ್ಸ್ ಗ್ಯಾರೇಜ್ ಮತ್ತು ವೆಲ್ಡಿಂಗ್ ವರ್ಕ್ ಹಾಗೂ ಖಃ ಖಿexಣiಟes ಪಂಪಾ ಕಾಂಪ್ಲೆಕ್ಸ್ ಮಾನವಿ ರವರುಗಳ ವಿರುದ್ದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಮಾನವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ರಕ್ಷಣೆ ಮಾಡಿದ 4 ಮಕ್ಕಳನ್ನು ಪಾಲಕರಿಗೆÉ ಹಸ್ತಾಂತರಿಸಲಾಯಿತು.
ಈ ದಾಳಿಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನಾಧಿಕಾರಿ ಮಂಜುನಾಥ ರೆಡ್ಡಿ, ಕಾರ್ಮಿಕ ನಿರೀಕ್ಷಕ ಎನ್. ವೆಂಕಟಸ್ವಾಮಿ, ಮಾನ್ವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಭದ್ರ ದೇವಿ, ಕಂದಾಯ ನಿರೀಕ್ಷಕ ಚರಣ್ ಸಿಂಗ್ ಠಾಕೂರು, ನಾಗರಾಜ, ರವಿಕುಮಾರ ಭಾಗವಹಿಸಿದ್ದರು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016 ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಒಂದು ವೇಳೆ ದುಡಿಸಿಕೊಂಡಲ್ಲಿ 50,000 ರೂಗಳ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ಇರುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಶಿಕ್ಷಾರ್ಹ ಅಪರಾದವಾಗಿರುತ್ತದೆ, ಕಾರಣ ಮಕ್ಕಳನ್ನು ದುಡಿಸಿಕೊಳ್ಳಬಾರದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button