Crime
ಬೀದರ್: ಭಾ.ಜ.ಪಾ. ಬೀದರ ಜಿಲ್ಲಾ ಎಸ್.ಟಿ. ಮೊರ್ಚಾ ಪದಾಧಿಕಾರಿಗಳ ನೇಮಕ
ಬೀದರ್,ಅ.7:- ಭಾರತಿಯ ಜನತಾ ಪಕ್ಷದ ಬೀದರ ಜಿಲ್ಲಾ ಎಸ್.ಟಿ. ಮೊರ್ಚಾದ ಕೆಳಕಂಡ ಪದಾಧಿಕಾರಿಗನ್ನು ಪಕ್ಷದ ಮುಖಂಡರೊಂದಿಗೆ ಜರ್ಚಿಸಿ ಜಿಲ್ಲಾಧ್ಯಕ್ಷರ ಒಪ್ಪಿಗೆ ಮೇರೆಗೆ ನೇಮಕ ಮಾಡಲಾಗಿದೆ.
ಜಿಲ್ಲಾ ಉಪಾಧ್ಯಕ್ಷರಾಗಿ ರಾಜಕುಮಾರ ಜಮಾದಾರ್, ರವಿ ಖಾಶೆಂಪೂರ್, ಪಂಢರಿ ಮೇತ್ರೆ, ಪ್ರಕಾಶ ಮೇತ್ರೆ, ರಾಜು ಜಮಾದಾರ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ ತಾಳಮಡಗಿ, ಗುಂಡಪ್ಪಾ ಬುಧೇರಾ, ಕಾರ್ಯದರ್ಶಿಯಾಗಿ ಅರುಣ ಬಾವಗಿ, ಮಾರುತಿ ನರಸಿಂಗ್, ರಿತಿಕಾಂತ ಸಿರಸಿವಾಡಿ, ಯೊಗೇಶ, ಪಂಡಿತ ಮುದಗುಂಡ, ಹಾಗೂ ಖಜಾಂಚಿಯಾಗಿ ದೀಪಕ ಚಿದ್ರಿ ಇತರರನ್ನು ನೇಮಕ ಮಾಡಲಾಗಿದೆ ಎಂದು ಭಾರತಿಯ ಜನತಾ ಪಾರ್ಟಿಯ ಜಿಲ್ಲಾ ಎಸ್.ಟಿ. ಮೊರ್ಚಾದ ಜಿಲ್ಲಾಧ್ಯಕ್ಷರಾದ ಮಹೇಶ ಎನ್ ಪಾಲಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




