
Crime
ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಮಡಿಕೇರಿ ಮೇ ೨೩ : ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣ ಮೈತಾಡಿ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ಸಮೀಪದ ಮೈತಾಡಿ ಬಟ್ಟಮಕ್ಕಿ ಗ್ರಾಮದ ನಿವಾಸಿ ವಿ.ಕೆ.ತಮ್ಮಯ್ಯ (೬೯) ಎಂಬವರೆ ಸಾವನ್ನಪ್ಪಿರುವ ವ್ಯಕ್ತಿ.
ಇಫ್ಕೋ ಕಂಪೆನಿಯ ಮಾಜಿ ಉದ್ಯೋಗಿಯಾಗಿದ್ದ ತಮ್ಮಯ್ಯ ಅವರು ಮೈತಾಡಿ ಬಟ್ಟಮಕ್ಕಿಯಲ್ಲಿ ವಾಸವಾಗಿದ್ದರು. ಮೃತರ ಪತ್ನಿ ಸುಶೀಲ ಅವರು ಸುಮಾರು ೮ ತಿಂಗಳ ಹಿಂದೆ ನಿಧನರಾಗಿದ್ದರು. ಇದೇ ಮೇ ೧೮ ರಂದು ಮಧ್ಯಾಹ್ನ ಮನೆಯಿಂದ ತೆರಳಿದ ತಮ್ಮಯ್ಯ ಮನೆಗೆ ಹಿಂದಿರುಗಿರಲಿಲ್ಲ. ಕುಟುಂಬಸ್ಥರು ತಮ್ಮಯ್ಯ ಅವರಿಗಾಗಿ ಹುಡುಕಾಟ ನಡೆಸಿ ಬಳಿಕ ಮೇ೨೦ ರಂದು ಪೊಲೀಸರಿಗೆ ದೂರು ನೀಡಿದ್ದರು.
ಮೇ ೨೩ ರಂದು ಬೆಳಗ್ಗೆ ಮೃತರ ಮಗ ವಿ.ಟಿ.ಸುದೀಪ ಅವರು ದÀನ ಕರುಗಳನ್ನು ಮನೆಯ ಸಮೀಪವಿರುವ ಕೆÀರೆಯ ಹತ್ತಿರ ಮೇಯಿಸಲು ಹೋದ ವೇಳೆ ಕೆರೆಯಲ್ಲಿ ಮೃತದೇಹ ತೇಲುತ್ತಿರುವುದು ಗೋಚರಿಸಿದೆ. ಪೊಲೀಸರು ಸ್ಥಳ ಮಹಜರು ನಡೆಸಿ ಸುದೀಪ ನೀಡಿದ ದೂರು ದಾಖಲಿಸಿಕೊಂಡಿದ್ದಾರೆ. ಫೋಟೋ :: ತಮ್ಮಯ್ಯ




