
Udupi
ಮಣಿಪಾಲ: ಆಟೋ ಚಾಲಕ ನಾಪತ್ತೆ
ಮಣಿಪಾಲ: ಆಟೋ ಚಾಲಕ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.
ವಾಲ್ಟರ್ ಡಿಸೋಜಾ (51 ವರ್ಷ) ಎಂಬುವವರು ಪೆರಂಪಳ್ಳಿಯ ಆಚಾರಿಬೆಟ್ಟು ಎಂಬಲ್ಲಿ ಒಬ್ಬನೇ ವಾಸವಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು.
ದಿನಾಂಕ:16/11/2024 ರಂದು ಮಧ್ಯಾಹ್ನ 13.00 ಗಂಟೆಗೆ ಪೆರಂಪಳ್ಳೀಯ ಆಚಾರಿಬೆಟ್ಟು ಎಂಬಲ್ಲಿದ್ದು, ಅನಂತರ ಆತನು ಎಲ್ಲಿಯೂ ಕಾಣದೇ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಕಾಣೆಯಾಗಿರುವುದಾಗಿದೆ. ಸದ್ರಿ ವಾಲ್ಟರ್ ಡಿಸೋಜಾನನ್ನು ಎಲ್ಲಾ ಕಡೆ ಹಾಗೂ ಸಂಬಂಧಿಕರಲ್ಲಿ ತಿಳಿಸಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 263/2024 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.




