Udupi

ಕಾರ್ಕಳದಲ್ಲಿ ಈ ಬಾರಿ ಕೈ ವಿಜಯದ ಸಮೀಪ?

ಕಾರ್ಕಳ: ಈ ಬಾತಿ ಹೆಚ್ಚು ಕುತೂಹಲ ಮೂಡಿಸಿರುವ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಯ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂಬುದು ಲೆಕ್ಕಾಚಾರ.

ಒಂದು ಕಡೆ ಬಿಜೆಪಿ ಸೋಲಿಗೆ ಪ್ರಮೋದ್ ಮುತಾಲಿಕ್ ಕಾರಣಕರ್ತರಾಗುತ್ತಾರೆ ಎಂದು ಹೇಳಲಾಗುತ್ತದೆ. ಅದರೊಂದಿಗೆ ಕೊಡುಗೈ ದಾನಿ ಖ್ಯಾತಿಯ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸಮುದಾಯವಾರು ಲೆಕ್ಕಚಾರದಲ್ಲೂ ಮುಂದಿದ್ದಾರೆ.

ಈ ಕ್ಷೇತ್ರದಲ್ಲಿ ಬಿಲ್ಲವರು 45 ಸಾವಿರ ಮತ ಇದ್ದರೆ ಬಂಟರ ಮತ 40 ಸಾವಿರಕ್ಕೂ ಅಧಿಕವಿದೆ. ಅತ್ತ ಕಾಂಗ್ರೆಸ್’ಗೆ ಹಿಂದುಳಿದ ವರ್ಗದ 30 ಸಾವಿರ ಮತಗಳು, ಕ್ರೈಸ್ತ ಮತ್ತು‌ಮುಸ್ಲಿಮರ 25 ಸಾವಿರ ಮತಗಳು ವರದಾನವಾಗಿ ಪರಿಣಮಿಸಲಿದೆ ಎಂಬುದು ಸದ್ಯದ ‌ಲೆಕ್ಕಚಾರ. 82% ಮತದಾನ ಈ ಕ್ಷೇತ್ರದಲ್ಲಿ ಆಗಿದ್ದು ಮತದಾನ ಹೆಚ್ಚಾದರೆ ಕಾಂಗ್ರೆಸ್’ಗೆ ಪ್ಲಸ್ ಎನ್ನುತ್ತಾರೆ ಕೈ ಮುಖಂಡರು.

ಇನ್ನು ಬಿಜೆಪಿ ಈ ಕ್ಷೇತ್ರದಲ್ಲಿ ಸುಲಭವಾಗಿ ಜಯ ಸಾಧಿಸಲಿದೆ ಎಂಬುವುದು ಅವರ ಲೆಕ್ಕಚಾರ. ಅಭಿವೃದ್ಧಿ, ಹಿಂದುತ್ವದ ಮುಂದೆ ಜನ ಸುನೀಲ್ ಅವರ ಕೈ ಹಿಡಿದಿದ್ದಾರೆ ಎಂದರೂ ಕೂಡ ಸಮೀಕ್ಷೆಗಳ ಆಧಾರದಲ್ಲಿ ಮುನಿಯಾಲು ಕೈ ಮೇಲಿದೆ. ಮೇ 13 ರಂದು ಸ್ಪಷ್ಟ ಚಿತ್ರಣ ಸಿಗಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button