ಟ್ವಿಟರ್‌ ಸಿಇಒ ಸ್ಥಾನಕ್ಕೆ ಎಲೋನ್ ಮಸ್ಕ್ ರಾಜೀನಾಮೆ: ಶೀಘ್ರದಲ್ಲೇ ಹೊಸಬರ ನೇಮಕ

ನ್ಯೂಯಾರ್ಕ್: ಟ್ವಿಟರ್ ಸಿಇಒ ಹುದ್ದೆಯಿಂದ ಎಲೋನ್ ಮಸ್ಕ್  ಶೀಘ್ರದಲ್ಲಿಯೇ ನಿರ್ಗಮಿಸಲಿದ್ದಾರೆ. ಕೆಲವು ವಾರಗಳ ನಂತರ ಟ್ವಿಟರ್ ಸಿಇಒ ಹುದ್ದೆ ತೊರೆಯಲು ಅವರು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಟ್ವೀಟರ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಟ್ವೀಟರ್ ಗೆ ಹೊಸ ಸಿಇಒ ಬರಲಿದ್ದು, ಇನ್ನೂ ಆರು ವಾರಗಳಲ್ಲಿ ಆಕೆ ಹುದ್ದೆ ಅಲಂಕರಿಸುವುದಾಗಿ ತಿಳಿಸಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸಿಲ್ಲ ಆದರೆ, ಆರು ವಾರಗಳಲ್ಲಿ ಹೊಸ ಸಿಇಒ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅವರು ಪ್ರಕಟಿಸಿದ್ದಾರೆ.

ಇದರಿಂದಾಗಿ ಮಾಸ್ಕ್ ಕಾರ್ಯನಿರ್ವಾಹಕ ಮುಖ್ಯಸ್ಥ ಮತ್ತು ಸಿಟಿಒ ಆಗಿ ಅವರು ಪಾತ್ರ ನಿರ್ವಹಿಸಲಿದ್ದಾರೆ. ಭವಿಷ್ಯದಲ್ಲಿ ಉತ್ಪನ್ನಗಳು, ಸಾಫ್ಟ್‌ವೇರ್ ಮತ್ತು ಸಿಸೊಪ್‌ಗಳನ್ನು ಮೇಲ್ವಿಚಾರಣೆ ಮಾಡುವುದಾಗಿ ಮಸ್ಕ್ ಹೇಳಿಕೊಂಡಿದ್ದಾರೆ. 

ಎಲೋನ್ ಮಸ್ಕ್‌ ಟ್ವಿಟ್ಟರ್‌ ಸಿಇಒ ಆದ ನಂತರ ಹಲವು ಬದಲಾವಣೆಗಳನ್ನ ತಂದಿದ್ದರು. ಉದ್ಯೋಗ ಕಡಿತಗೊಳಿಸಿದ್ದಲ್ಲದೇ, ಉದ್ಯೋಗ ಸಮಯ ಹೆಚ್ಚಿಸಿದ್ದರು. ಜೊತೆಗೆ ಬ್ಲೂ ಟಿಕ್‌ ಪಡೆಯಲು ಹಣ ಪಾವತಿಸುವ ಕ್ರಮ ಜಾರಿಗೆ ತಂದರು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Latest Indian news

Popular Stories