
Featured StoryState News
GST ದುಡ್ಡೇ ಕೇಳಿಲ್ಲ 15 ಲಕ್ಷ ಎಲ್ಲಿ ಕೇಳ್ತೀರಿ – ಬಿಜೆಪಿಗೆ ಸದನದಲ್ಲಿ ಪ್ರಸಾದ್ ಅಬ್ಬಯ್ಯ ಟಾಂಗ್!
ಬೆಂಗಳೂರು: ಗ್ಯಾರಂಟಿ ಗದ್ದಲ ಸದನದಲ್ಲಿ ವಿರೋಧ ಪಕ್ಷ ನಡೆಸುತ್ತಿರುವಾಗ ಹಲವು ವಾಗ್ವಾದಗಳು ನಡೆಯುತ್ತಿವೆ.
ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ದರು. ಬ್ಯಾಂಕ್ ಖಾತೆ ಮಾಡಿಸಿದರು, ಎಲ್ಲಿ ಹಣ ಹಾಕಿದರು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಹೆಚ್.ಕೋನರೆಡ್ಡಿ ಪ್ರಶ್ನೆ ಮಾಡಿದರು.
ಈ ವೇಳೆ ಕೋನರೆಡ್ಡಿ ಮಾತಿಗೆ ಶಾಸಕರಾದ ವಿಜಯೇಂದ್ರ, ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ರು. ಮೋದಿ ಹಾಗೆ ಹೇಳಿದ್ರೆ ದಾಖಲೆ ಕೊಡಿ ಎಂದು BJP ಸದಸ್ಯರು ಪಟ್ಟು ಹಿಡಿದ್ರು. ವಿಡಿಯೋ ಕ್ಲಿಪಿಂಗ್ ಕೊಡಿ ನಾವೇ ಪ್ರಧಾನಿಗೆ ಕೇಳ್ತೀವಿ ಎಂದು ಯತ್ನಾಳ್ ಗುಡುಗಿದರು.
ಆಗ GST ದುಡ್ಡೇ ಕೇಳಿಲ್ಲ ಇದನ್ನೇನು ಕೇಳ್ತೀರಿ ಎಂದು ಪ್ರಸಾದ್ ಅಬ್ಬಯ್ಯ ಟಾಂಗ್ ಕೊಟ್ರು. ಈ ವೇಳೆ ಗ್ಯಾರಂಟಿ ವಿಚಾರ ಮುಂದಿಟ್ಟುಕೊಂಡು BJP ಸದಸ್ಯರ ಗದ್ದಲ ಶುರುವಾಯಿತು.




