GST ದುಡ್ಡೇ ಕೇಳಿಲ್ಲ 15 ಲಕ್ಷ ಎಲ್ಲಿ ಕೇಳ್ತೀರಿ – ಬಿಜೆಪಿಗೆ ಸದನದಲ್ಲಿ ಪ್ರಸಾದ್ ಅಬ್ಬಯ್ಯ ಟಾಂಗ್!

ಬೆಂಗಳೂರು: ಗ್ಯಾರಂಟಿ ಗದ್ದಲ ಸದನದಲ್ಲಿ ವಿರೋಧ ಪಕ್ಷ ನಡೆಸುತ್ತಿರುವಾಗ ಹಲವು ವಾಗ್ವಾದಗಳು ನಡೆಯುತ್ತಿವೆ.

ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ದರು. ಬ್ಯಾಂಕ್​ ಖಾತೆ ಮಾಡಿಸಿದರು, ಎಲ್ಲಿ ಹಣ ಹಾಕಿದರು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್​ ಶಾಸಕ ಎನ್​.ಹೆಚ್​​​.ಕೋನರೆಡ್ಡಿ ಪ್ರಶ್ನೆ ಮಾಡಿದರು.

ಈ ವೇಳೆ ಕೋನರೆಡ್ಡಿ ಮಾತಿಗೆ ಶಾಸಕರಾದ ವಿಜಯೇಂದ್ರ, ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ರು. ಮೋದಿ ಹಾಗೆ ಹೇಳಿದ್ರೆ ದಾಖಲೆ ಕೊಡಿ ಎಂದು BJP ಸದಸ್ಯರು ಪಟ್ಟು ಹಿಡಿದ್ರು. ವಿಡಿಯೋ ಕ್ಲಿಪಿಂಗ್​​ ಕೊಡಿ ನಾವೇ ಪ್ರಧಾನಿಗೆ ಕೇಳ್ತೀವಿ ಎಂದು ಯತ್ನಾಳ್ ಗುಡುಗಿದರು.

ಆಗ GST ದುಡ್ಡೇ ಕೇಳಿಲ್ಲ ಇದನ್ನೇನು ಕೇಳ್ತೀರಿ ಎಂದು ಪ್ರಸಾದ್ ಅಬ್ಬಯ್ಯ ಟಾಂಗ್ ಕೊಟ್ರು. ಈ ವೇಳೆ ಗ್ಯಾರಂಟಿ ವಿಚಾರ ಮುಂದಿಟ್ಟುಕೊಂಡು BJP ಸದಸ್ಯರ ಗದ್ದಲ ಶುರುವಾಯಿತು.

Latest Indian news

Popular Stories