
Udupi
ಉಡುಪಿ | ನಾಲ್ವರು ಯುವಕರಿಂದ ಕಿರಿಕ್ – ಬಂಧನ
ಉಡುಪಿ, ಅಕ್ಟೋಬರ್ 7: ನಾಲ್ವರು ಯುವಕರು ಆಟೋ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಅಕ್ಟೋಬರ್ 7 ಶನಿವಾರ ತಡರಾತ್ರಿ ನಡೆದಿದೆ.
ಇಲ್ಲಿನ ಸಿಟಿ ಸೆಂಟರ್ ಮಾಲ್ ಬಳಿ ಈ ಘಟನೆ ನಡೆದಿದೆ.
ಕುಡಿದ ಅಮಲಿನಲ್ಲಿದ್ದ ನಾಲ್ವರು ಯುವಕರು ಹಿರಿಯ ನಾಗರಿಕರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಕೃತ್ಯವನ್ನು ಆ ಭಾಗದ ಆಟೋ ಚಾಲಕರು ಗಮನಿಸಿದಾಗ ಯುವಕರನ್ನು ತಡೆದು ಹಿರಿಯ ನಾಗರಿಕರನ್ನು ಹಲ್ಲೆಯಿಂದ ರಕ್ಷಿಸಲು ಯತ್ನಿಸಿದ್ದಾರೆ.
ಈ ವಿಚಾರವಾಗಿ ಯುವಕರು ಆಟೋ ರಿಕ್ಷಾ ಚಾಲಕನನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಯುವಕರು ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆದು ಹಲ್ಲೆ ನಡೆದಿದೆ ಎನ್ನಲಾಗಿದೆ. ಉಡುಪಿ ನಗರ ಪೊಲೀಸರು ಗಲಾಟೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.



