Udupi

ಉಡುಪಿ | ನಾಲ್ವರು ಯುವಕರಿಂದ ಕಿರಿಕ್ – ಬಂಧನ

ಉಡುಪಿ, ಅಕ್ಟೋಬರ್ 7:   ನಾಲ್ವರು ಯುವಕರು ಆಟೋ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಅಕ್ಟೋಬರ್ 7 ಶನಿವಾರ ತಡರಾತ್ರಿ ನಡೆದಿದೆ.

ಇಲ್ಲಿನ ಸಿಟಿ ಸೆಂಟರ್ ಮಾಲ್ ಬಳಿ ಈ ಘಟನೆ ನಡೆದಿದೆ.

ಕುಡಿದ ಅಮಲಿನಲ್ಲಿದ್ದ ನಾಲ್ವರು ಯುವಕರು ಹಿರಿಯ ನಾಗರಿಕರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಕೃತ್ಯವನ್ನು ಆ ಭಾಗದ ಆಟೋ ಚಾಲಕರು ಗಮನಿಸಿದಾಗ ಯುವಕರನ್ನು ತಡೆದು ಹಿರಿಯ ನಾಗರಿಕರನ್ನು ಹಲ್ಲೆಯಿಂದ ರಕ್ಷಿಸಲು ಯತ್ನಿಸಿದ್ದಾರೆ.

ಈ ವಿಚಾರವಾಗಿ ಯುವಕರು ಆಟೋ ರಿಕ್ಷಾ ಚಾಲಕನನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ಯುವಕರು ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆದು ಹಲ್ಲೆ ನಡೆದಿದೆ‌ ಎನ್ನಲಾಗಿದೆ. ಉಡುಪಿ ನಗರ ಪೊಲೀಸರು ಗಲಾಟೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button