
Bengaluru UrbanFeatured Story
ಮಂಗಳೂರು: ಸ್ಕೂಟರ್ ಸವಾರನ ಮೇಲೆ ಹರಿದ ಕಾರು, ಸವಾರ ಮೃತ್ಯು
ಮಂಗಳೂರು :ಕಾರಿನ ಚಕ್ರದಡಿ ಸಿಲುಕಿ ಸ್ಕೂಟರ್ ಸವಾರನೊಬ್ಬ ಮೃತಾಪಟ್ಟಿದ್ದಾನೆ.
ಮೃತಪಟ್ಟವರನ್ನು ಕೌಶಿಕ್ ಎಂದು ಗುರುತಿಸಲಾಗಿದೆ.’ಬಾರೆಬೈಲ್ ಅಡ್ಡರಸ್ತೆ ಕಡೆಯಿಂದ ಎ.ಜೆ ಆಸ್ಪತ್ರೆ ಎದುರುಗಡೆಯಾಗಿ ಕುಂಟಿಕಾನ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾಕ್ಕೆ ಸ್ಕೂಟರ್ವೊಂದು ಬುಧವಾರ ರಾತ್ರಿ 7.50ರ ಸುಮಾರಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಎ.ಜೆ ಆಸ್ಪತ್ರೆಯ ಎದುರಿನ ಬಾರೆಬೈಲ್ ಅಡ್ಡರಸ್ತೆ ಕಡೆಗೆ ಸಾಗಿರುವ ಸರ್ವಿಸ್ ರಸ್ತೆಯಲ್ಲಿ ಹಾದುಬಂದ ಕಾರು ಕೌಶಿಕ್ ಅವರ ಮೇಲೆ ಸಾಗಿತ್ತು ಎನ್ನಲಾಗಿದ್ದು ತಲೆಗೆ ಏಟು ಬಿದ್ದ ಅವರನ್ನು ಸಾರ್ವಜನಿಕರು ಎ.ಜೆ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.




